ಇ-ಕೆವೈಸಿ ಇಲ್ಲದ APL ರೇಷನ್ ಕಾರ್ಡ್ ರದ್ದು: ಆಹಾರ ಇಲಾಖೆ

(ನ್ಯೂಸ್ ಕಡಬ) newskadaba.com . 16. ಬೆಂಗಳೂರು: ರಾಜ್ಯ ಸರ್ಕಾರವು ಎಪಿಎಲ್‌ ಕಾರ್ಡ್‌ದಾರರಿಗೆ ಶಾಕ್‌ ನೀಡಿದ್ದು, ರೇಷನ್ ಕಾರ್ಡ್‌ಗೆ ದೃಢೀಕರಣ ಅಂದರೆ e-kyc ಮಾಡದ ಕಾರಣಕ್ಕಾಗಿ APL ಕಾರ್ಡ್ ರದ್ದು ಮಾಡಲಾಗಿದೆ ಎಂದು ಆಹಾರ ಇಲಾಖೆ ತಿಳಿಸಿದೆ.

ಅದರೊಂದಿಗೆ ಎಪಿಎಲ್‌ ಕಾರ್ಡ್‌ದಾರರಿಗೆ ನೀಡುತ್ತಿದ್ದ ರೇಷನ್‌ ಅನ್ನೂ ಸ್ಥಗಿತ ಮಾಡಲಾಗಿದೆ. ಸರ್ಕಾರ ಹಾಗೂ ಆಹಾರ ಇಲಾಖೆ ವಿರುದ್ಧ APL ಕಾರ್ಡ್‌ದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ರಾಜ್ಯದಲ್ಲಿ 25,62,562 APL ಕಾರ್ಡ್‌ಗಳಿವೆ. ನಕಲಿ ರೇಷನ್ ಕಾರ್ಡ್ ತಡೆಯುವ ನಿಟ್ಟಿನಲ್ಲಿ e-KYCಅನ್ನು ಇಲಾಖೆ ಕಡ್ಡಾಯ ಮಾಡಿತ್ತು. ಈ ಹಿಂದೆ ಬೋಗಸ್ ಕಾರ್ಡ್ ಗಳನ್ನ ತಡೆಯುವ ಸಲುವಾಗಿ ರಾಜ್ಯಾದ್ಯಂತ ರೇಷನ್ ಕಾರ್ಡ್ ಪರಿಶೀಲನೆ ಕಾರ್ಯ ನಡೆದಿತ್ತು.  2019-2022ರ ವರೆಗೆ ರೇಷನ್ ಕಾರ್ಡ್ ಗೆ ಮತ್ತೆ e-KYC ಪ್ರಕ್ರಿಯೆ ಮಾಡಿಸುವಂತೆ ಇಲಾಖೆ ನಿಯಮ ಜಾರಿ ಮಾಡಿತ್ತು. ಈ ಸಂಧರ್ಭದಲ್ಲಿ ಶೇ. 80ರಷ್ಟು APL ಫಲಾನುಭವಿಗಳು e-KYC ಮಾಡಿಕೊಂಡಿದ್ದರು. ಇನ್ನುಳಿದ ಶೇ. 20 ರಷ್ಟು ಕಾರ್ಡ್ ದಾರರು ನ್ಯಾಯಬೆಲೆ ಅಂಗಡಿಗಳಿಗೆ ಹೋಗಿ e-KYC ಮಾಡಿಕೊಂಡಿರಲಿಲ್ಲ. ಅಂತವರ ಕಾರ್ಡ್ ಗಳು ರದ್ದಾಗಿವೆ.

Also Read  ನಾಡಿಗೆ ಬಂದ ಕಾಡಾನೆ - ಉಪ ವಲಯ ಅರಣ್ಯಾಧಿಕಾರಿ ಮೇಲೆ ದಾಳಿ ➤ ಆನೆಯನ್ನು ಮರಳಿ ಕಾಡಿಗಟ್ಟುತ್ತಿದ್ದ ವೇಳೆ ಘಟನೆ

error: Content is protected !!
Scroll to Top