‘ನನ್ನ ತೆರಿಗೆ ನನ್ನ ಹಕ್ಕು’ ಎಂದು ಜಯನಗರ ಜನತೆ ಡಿಕೆಶಿ ವಿರುದ್ದ ನ.17ಕ್ಕೆ ಹೋರಾಟ

(ನ್ಯೂಸ್ ಕಡಬ) newskadaba.com . 16. ಬೆಂಗಳೂರು: ಅನುದಾನ ಬಿಡುಗಡೆ ಮಾಡದ್ದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ‘ನನ್ನ ತೆರಿಗೆ ನನ್ನ ಹಕ್ಕು’ ಹೆಸರಿನಲ್ಲಿ ನವೆಂಬರ್ 17ರಂದು ಉಗ್ರ ಹೋರಾಟಕ್ಕೆ ಜಯನಗರದ ಸಂಘ ಸಂಸ್ಥೆಗಳು ಮುಂದಾಗಿವೆ.

ಬೆಂಗಳೂರು ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್ ಅವರಿಂದ ಆದ ಅನ್ಯಾಯವನ್ನು ಖಂಡಿಸಿ ಜಯನಗರ 70 ಸಂಘಟನೆಯ ಸದಸ್ಯರು ದೊಡ್ಡ ಮಟ್ಟದ ಹೋರಾಟಕ್ಕೆ ಮುಂದಾಗಿದ್ದಾರೆ. ಹೋರಾಟಕ್ಕೆ ಸಂಬಂಧಿಸಿದಂತೆ ಜಯನಗರ ಶಾಸಕ ರಾಮಮೂರ್ತಿ ಮಾತನಾಡಿ, ಅನುದಾನ ವಿಚಾರವನ್ನು ಕೇಳಿದ್ದಕ್ಕೆ ನನ್ನ ಮುಂದೆ ತಗ್ಗಿ ಬಗ್ಗಿ ನಡೆಯಬೇಕು. ನಾನು ನನ್ನ ಕ್ಷೇತ್ರದ ಜನರು, ಗುರು ಹಿರಿಯರ ಮುಂದೆ ತಗ್ಗಿ ಬಗ್ಗಿ ನಡೆಯುತ್ತೇನೆ. ಜಯನಗರ ಜನರು ತೆರಿಗೆ ಪಾವತಿಸುತ್ತಿದ್ದಾರೆ. ಈ ಕಾರಣಕ್ಕೆ ನನ್ನ ತೆರಿಗೆ ನನ್ನ ಹಕ್ಕು ಹೆಸರಿನಲ್ಲಿ ಬೃಹತ್ ಹೋರಾಟವನ್ನು ಮಾಡುತ್ತೇವೆ ಎಂದಿದ್ದಾರೆ.

Also Read  ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಗೆ ಕೊರೋನಾ ಪಾಸಿಟಿವ್ .!

error: Content is protected !!
Scroll to Top