ಮಣಿಪುರ: ಅಸ್ಸಾಂ ಗಡಿಯಲ್ಲಿ 3 ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com . 16. ಇಂಫಾಲ: ಮಣಿಪುರದ ಜಿರಿಬಾಮ್ ಜಿಲ್ಲೆಯಿಂದ ಶಂಕಿತ ಕುಕಿ ಬಂಡುಕೋರರು ಒಂದೇ ಕುಟುಂಬದ 6 ಮಂದಿಯನ್ನು ಅಪಹರಿಸಿದ 3 ದಿನಗಳ ಬಳಿಕ ಶಿಶು ಸೇರಿದಂತೆ ಇಬ್ಬರು ಮಕ್ಕಳು ಮತ್ತು ಮಹಿಳೆಯ ಕೊಳೆತ ಶವ ಮಣಿಪುರ-ಅಸ್ಸಾಂ ಗಡಿಯ ಬಳಿ ನ.15 ರಂದು ಪತ್ತೆಯಾಗಿದೆ.

ಸದ್ಯ ಜಿರಿಬಾಮ್ ಜಿಲ್ಲೆಯಲ್ಲಿ ತೀವ್ರ ನಿಗಾ ಇರಿಸಲಾಗಿದೆ. ನ. 11ರಂದು ಮೂವರು ಮಹಿಳೆಯರು ಸಹಿತ 6 ಮಂದಿಯನ್ನು ಅಪಹರಿಸಲಾಗಿತ್ತು. ಮೃತದೇಹಗಳ ಗುರುತು ಇನ್ನೂ ಪತ್ತೆಯಾಗಿಲ್ಲ.ಅಪಹರಣ ನಡೆದ ಗ್ರಾಮದಿಂದ ಸುಮಾರು 15 ಕಿ.ಮೀ. ದೂರದಲ್ಲಿ ಅಂತಾರಾಜ್ಯ ಗಡಿಯ ಸಮೀಪ ಸದಿ ತೀರದಲ್ಲಿ 3 ಮೃತದೇಹ ಪತ್ತೆಯಾಗಿದೆ. ಆದರೆ ಇದು ಅಪಹರಣಲಕ್ಕೊಳಗಾದವರ ಮೃತದೇಹವೇ ಎನ್ನುವುದು ಖಚಿತವಾಗಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Also Read  ಕೊಳೆತ ಮೊಟ್ಟೆ ಪೂರೈಕೆ..! - ಗರ್ಭಿಣಿ ಮಹಿಳೆ, ಮಕ್ಕಳು ಅಸ್ವಸ್ಥ

error: Content is protected !!
Scroll to Top