ಇಂದಿನಿಂದ ಮಹಾರಾಷ್ಟ್ರ ಚುನಾವಣಾ ಪ್ರಚಾರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್

(ನ್ಯೂಸ್ ಕಡಬ) newskadaba.com . 14.  ಕರ್ನಾಟಕದ ಉಪಚುನಾವಣೆ ಬಳಿಕ ಇದೀಗ ಮಹಾರಾಷ್ಟ್ರ ಚುನಾವಣಾ ಅಖಾಡಕ್ಕಿಳಿಯಲು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಜ್ಜಾಗಿದ್ದಾರೆ. ಇಂದಿನಿಂದ ಮೂರು ದಿನಗಳ ಕಾಲ ಮಹಾರಾಷ್ಟ್ರದಲ್ಲಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ. ಇಂದು ಭೀವಂಡಿ, ಚಾಂಡಿವಾಲಿ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ.

ನಾಳೆ ನ.16 ಸೊಲ್ಲಾಪುರಕ್ಕೆ ತೆರಳಲಿ ಎರಡು ದಿನಗಳ ಕಾಲ ಮತ್ತೆ ಸರಣಿ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಾಳೆ ಜಾಟ್, ಅಕ್ಕಾಲ್ಕೋಟ್,ಸೊಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ. ನಾಡಿದ್ದು, ಲಾಥೂರ್ ಕ್ಷೇತ್ರದಲ್ಲಿ ಪ್ರಚಾರ ಮಾಡಲಿದ್ದಾರೆ ಮಹಾರಾಷ್ಟ್ರದಲ್ಲಿ ಎಂವಿಎ ಮೈತ್ರಿಯೊಂದಿಗೆ ಕಾಂಗ್ರೆಸ್​, ಶಿವಸೇನಾ (ಯುಬಿಟಿ) ಮತ್ತು ನ್ಯಾಷನಲ್​ ಕಾಂಗ್ರೆಸ್​ ಪಕ್ಷ (ಎಸ್​ಪಿ) ಸ್ಪರ್ಧಿಸುತ್ತಿದೆ. ನವೆಂಬರ್​ 20ರಂದು ಮಹಾರಾಷ್ಟ್ರದಲ್ಲಿ ಮತದಾನ ನಡೆಯಲಿದ್ದು, ನವೆಂಬರ್​ 23ಕ್ಕೆ ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.

Also Read  ಮದ್ಯ ಖರೀದಿಯ ಹಣಕ್ಕಾಗಿ ಮಗುವನ್ನೇ ಮಾರಾಟ ಮಾಡಿದ ದಂಪತಿ

 

error: Content is protected !!
Scroll to Top