(ನ್ಯೂಸ್ ಕಡಬ) newskadaba.com ನ. 14. ಖ್ಯಾತ ಗಾಯಕ ದಿಲ್ಜೀತ್ ದೊಸ್ಸಾಂಜ್‌ಗೆ ತೆಲಂಗಾಣ ಸರ್ಕಾರ ನೊಟೀಸ್ ನೀಡಿದೆ.
ದಿಲ್ಜಿತ್ ದೊಸ್ಸಾಂಜ್ ಅವರು ‘ದಿಲ್ಲುಮಿನಾಟಿ’ ಹೆಸರಿನ ಲೈವ್ ಕಾನ್ಸರ್ಟ್ ಟೂರ್ ಮಾಡುತ್ತಿದ್ದು, ದೇಶದ ಹಲವು ನಗರಗಳಲ್ಲಿ ತಮ್ಮ ಶೋ ನಡೆಸಿಕೊಡಲಿದ್ದಾರೆ. ಇದೀಗ ತೆಲಂಗಾಣದ ಹೈದರಾಬಾದ್ ನಲ್ಲಿ ದಿಲ್ಜಿತ್ ದೊಸ್ಸಾಂಗ್ ಅವರ ಲೈವ್ ಕಾನ್ಸರ್ಟ್ ಇಂದು ನಡೆಯಲಿದೆ. ಈ ಶೋಗೆ ಮುನ್ನ, ತೆಲಂಗಾಣ ಸರ್ಕಾರ ದಿಲ್ಜಿತ್‌ಗೆ ನೊಟೀಸ್ ನೀಡಿದ್ದು, ಕೆಲವು ಹಾಡುಗಳನ್ನು ಹಾಡದಂತೆ ಎಚ್ಚರಿಸಿದೆ. ಒಂದು ವೇಳೆ ಹಾಡಿದಲ್ಲಿ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದೆ. ವೇದಿಕೆ ಮೇಲೆ ಮಕ್ಕಳನ್ನು ಕರೆತರುವಂತಿಲ್ಲ, ಇದು ಡಬ್ಲುಹೆಚ್‌ಓ ನಿಯಮಕ್ಕೆ ವಿರುದ್ಧ ಆಗಿರಲಿದೆ ಎಂದು ಕೂಡ ಸರ್ಕಾರ ಎಚ್ಚರಿಸಿದೆ.
Also Read ನೀವು ಇಷ್ಟಪಟ್ಟ ಹುಡುಗಿ ಜೊತೆಗೆ ವಿವಾಹ ಆಗಲು ಈ ಸಣ್ಣ ಕೆಲಸ ಮಾಡಿ ಸಾಕು ನಿಮ್ಮ ಕಷ್ಟಗಳು ಪರಿಹಾರ ಆಗುತ್ತದೆ