ಅಪರೂಪದ ಕಾಯಿಲೆಯಿರುವ ಮಕ್ಕಳಿಗೆ ಸರ್ಕಾರ ನೆರವು:ಶರಣ್ ಪ್ರಕಾಶ್ ಪಾಟೀಲ್

(ನ್ಯೂಸ್ ಕಡಬ) newskadaba.com ಬೆಂಗಳೂರು, . 15. ಅಪರೂಪದ ಕಾಯಿಲೆ ಹೊಂದಿರುವ ಮಕ್ಕಳಿಗೆ ಅಗತ್ಯ ಚಿಕಿತ್ಸೆ ಒದಗಿಸಲು ಸರ್ಕಾರ ಬದ್ಧವಾಗಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರು ಗುರುವಾರ ಭರವಸೆ ನೀಡಿದರು.

ಇಡೀ ದೇಹವನ್ನೆ ಅಲುಗಾಡಿಸುವ ಬೆನ್ನುಮೂಳೆ ಸ್ನಾಯು ಕ್ಷೀಣತೆಯಂಥ ಅಪಾಯವನ್ನು ತಡೆಗಟ್ಟಲು ರಾಜ್ಯ ಸರ್ಕಾರ ಒತ್ತು‌ ನೀಡುತ್ತಿದೆ. ಇದು ಅನುವಂಶಿಯವಾಗಿ ಶಿಶುಗಳಲ್ಲಿ ಹಾಗೂ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಅನುವಂಶೀಯ ಕಾಯಿಲೆಗೆ ಔಷಧಿಗಳು ದೊರೆಯುವಂತೆ ಮಾಡಲು ಸರ್ಕಾರ ಮುಂದಾಗಿದೆ. ಹೆಚ್ಚುವರಿಯಾಗಿ 75 ಕೋಟಿ ರೂ.ಗಳನ್ನು ನೀಡಲಾಗಿದ್ದು, ಇಂತಹ ಕಾಯಿಲೆಗಳ ಚಿಕಿತ್ಸೆಗಾಗಿ ವಿಶೇಷ ನಿಧಿ ಕೂಡ ಆರಂಭಿಸಲಾಗಿದೆ. ಎಂದು ಹೇಳಿದರು.

Also Read  ಗಂಡನ ಕೊಲೆ ಮಾಡಿ ಮನೆಯಲ್ಲೇ ಸಮಾಧಿ ಮಾಡಿದ ಪತ್ನಿ

error: Content is protected !!
Scroll to Top