ಶಬರಿಮಲೆ ದೇವಾಲಯದಲ್ಲಿ ಇಂದಿನಿಂದ ಮಂಡಲ ಪೂಜೆ, ಡಿ.26 ರವರೆಗೆ ದರ್ಶನಕ್ಕೆ ಅವಕಾಶ

(ನ್ಯೂಸ್ ಕಡಬ) newskadaba.com ಶಬರಿಮಲೆ, . 15.ಶಬರಿಮಲೆಯಲ್ಲಿ ಮಂಡಲ ಪೂಜೆಗಾಗಿ ನ.15ರಂದು ದೇವಸ್ಥಾನ ತೆರೆಯಲಿದ್ದು, ಡಿ.26ರ ತನಕ ದರ್ಶನಕ್ಕೆ ಅವಕಾಶವಿದೆ. ನಿತ್ಯ 70000 ಜನರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲು ದೇಗುಲದ ಆಡಳಿತ ಮಂಡಳಿ ನಿರ್ಧರಿಸಿದ್ದು, ಒಂದು ವೇಳೆ ಜನಸಂದಣಿ ತೀರಾ ಹೆಚ್ಚಾದಲ್ಲಿ ಅರ್ಧಗಂಟೆ ಕಾಲ ದರ್ಶನದ ಸಮಯ ವಿಸ್ತರಿಸಲು ಚಿಂತಿಸಲಾಗಿದೆ.

ಈಗಾಗಲೇ ವರ್ಚುವಲ್‌ ಕ್ಯೂ ಮೂಲಕ ಲಕ್ಷಾಂತರ ಭಕ್ತರು ನ.15- ಡಿ.29ರವರೆಗಿನ ಸಮಯವನ್ನು ಮುಂಗಡವಾಗಿ ಭೇಟಿಗಾಗಿ ಕಾದಿರಿಸಿದ್ದಾರೆ. ಇದರ ಜೊತೆಗೆ , ಪಂಪಾ, ಎರುಮೆಲಿ, ವಂದಿಪೆರಿಯಾರ್‌ಗಳಲ್ಲಿಯೂ ನಿತ್ಯ 10,000 ಭಕ್ತರಿಗೆ ಬುಕಿಂಗ್‌ ಮಾಡಿಸಲು ಅವಕಾಶವಿದ್ದು, ಇದಕ್ಕೆ ಆಧಾರ್‌ ಕಾರ್ಡ್‌, ವೋಟರ್‌ ಐಡಿ, ಪಾಸ್‌ಪೂರ್ಟ್‌ ಪ್ರತಿ ತೋರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

Also Read  ಮಂಗಳೂರು: ಎಂಟನೇ ಮಹಡಿಯಿಂದ ಕೆಳಗೆ ಬಿದ್ದು ಐದು ವರ್ಷದ ಮಗು ಮೃತ್ಯು

error: Content is protected !!
Scroll to Top