ಕುಸಿದುಬಿದ್ದು ಉಪನ್ಯಾಸಕಿ ಮೃತ್ಯು – 5 ಜನರಿಗೆ ಅಂಗಾಂಗ ದಾನ

(ನ್ಯೂಸ್ ಕಡಬ) newskadaba.com ನ. 14. ಕುಸಿದುಬಿದ್ದು ತೀವ್ರ ಅಸ್ವಸ್ಥರಾಗಿ ನಗರದ ಸಂತ ಅಲೋಶಿಯಸ್‌ ಕಾಲೇಜಿನ ಉಪನ್ಯಾಸಕಿ, ಬಜಪೆ ನಿವಾಸಿ ಗ್ಲೋರಿಯಾ ರೋಡ್ರಿಗಸ್‌ ಅವರು ಮೃತಪಟ್ಟಿದ್ದು, ಅವರ ಅಂಗಾಂಗವನ್ನು ದಾನಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

 

ನ. 08ರಂದು ಕಾಲೇಜಿನಲ್ಲಿ ಮೆಟ್ಟಿಲು ಇಳಿಯುತ್ತಿದ್ದಾಗ ತಲೆಸುತ್ತು ಬಂದು ಬಿದ್ದ ಪರಿಣಾಮ ಅವರ ತಲೆಗೆ ಗಂಭೀರ ಗಾಯವಾಗಿತ್ತು. ಕೂಡಲೇ ಅವರನ್ನು ಕಂಕನಾಡಿ ಫಾದರ್‌ ಮುಲ್ಲರ್‌ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ನಡುವೆ ಅವರ ಮೆದುಳು ನಿಷ್ಕ್ರಿಯವಾಗಿರುವುದಾಗಿ ನುರಿತ ವೈದ್ಯರ ತಂಡ ತಿಳಿಸಿದ್ದರು.

ಇದೀಗ ಮೃತ ಗ್ಲೋರಿಯಾ ರೋಡ್ರಿಗಸ್‌ ಅವರ ದೇಹದ ಅಂಗಾಂಗಳಾದ ಕಣ್ಣು, ಹೃದಯ, ಚರ್ಮ, ಯಕೃತ್‌, ಎರಡು ಕಿಡ್ನಿ ಹಾಗೂ ಶ್ವಾಸಕೋಶವನ್ನು ದಾನ ಮಾಡಲಾಗಿದೆ. ಯಕೃತ್‌ ನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ನೀಡಲಾಗಿದೆ.

Also Read  ಬಂಟ್ವಾಳ: ನೇಣುಬಿಗಿದು ಯುವಕ ಆತ್ಮಹತ್ಯೆ

ಶ್ವಾಸಕೋಶವನ್ನು ಬೆಂಗಳೂರಿನ ಬಿಜಿಎಸ್‌ ಆಸ್ಪತ್ರೆಗೆ ನೀಡಲಾಗಿದೆ. ಹೃದಯವನ್ನು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ರವಾನಿಸಲಾಗಿದೆ. ಕಿಡ್ನಿಯನ್ನು ಕೆಎಂಸಿ ಆಸ್ಪತ್ರೆ ಮಣಿಪಾಲ ಹಾಗೂ ಚರ್ಮ ಹಾಗೂ ಕಣ್ಣುಗಳನ್ನು ಫಾದರ್‌ ಮುಲ್ಲರ್‌ ಆಸ್ಪತ್ರೆಯಲ್ಲಿ ಇಡಲಾಗಿದೆ.

error: Content is protected !!
Scroll to Top