(ನ್ಯೂಸ್ ಕಡಬ) newskadaba.com ಟೋಕಿಯೋ, ನ. 14. ಚಂದ್ರ ಮತ್ತು ಮಂಗಳನ ಅಂಗಳದಲ್ಲಿ ಮರ ಬಳಸಿ ಮನೆ ಕಟ್ಟುವ ಯೋಜನೆಯನ್ನು ಹೊಂದಿರುವ ವಿಜ್ಞಾನಿಗಳು, ಇದರ ಸಾಧ್ಯಾಸಾಧ್ಯತೆಯನ್ನು ಅರ್ಥ ಮಾಡಿಕೊಳ್ಳಲು ಬಾಹ್ಯಾಕಾಶಕ್ಕೆ ಮರದಿಂದ ತಯಾರಿಸಿದ ಉಪಗ್ರಹ ಲಿಗ್ನೋಸ್ಯಾಟ್ ಉಡಾವಣೆ ಮಾಡಿದ್ದಾರೆ. ಇದು ವಿಶ್ವದಲ್ಲೇ ಮೊದಲ ಮರದ ಉಪಗ್ರಹ ಎಂಬ ಖ್ಯಾತಿ ಪಡೆದುಕೊಂಡಿದೆ.
ಮರ ಎಂಬುದಕ್ಕೆ ಲ್ಯಾಟಿನ್ ಭಾಷೆಯಲ್ಲಿರುವ ಪದವನ್ನು ಬಳಸಿ ಲಿಗ್ನೋಸ್ಯಾಟ್ ಎಂಬ ಹೆಸರನ್ನು ಈ ಉಪಗ್ರಹಕ್ಕೆ ಇಡಲಾಗಿದೆ. ಜಪಾನ್ನ ಕ್ಯೋಟೋ ವಿವಿ ಮತ್ತು ಸುಮಿಟಾಮೋ ಫಾರೆಸ್ಟ್ರಿ ಸೇರಿ ತಯಾರು ಮಾಡಿರುವ ಈ ಉಪಗ್ರಹವನ್ನು ಅಮೆರಿಕದ ಸ್ಪೇಸ್ ಎಕ್‌್ಸನ ರಾಕೆಟ್ ಮೂಲಕ ನವೆಂಬರ್ 5ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಉಡಾವಣೆ ಮಾಡಲಾಗಿದೆ. ಬಳಿಕ ಇದನ್ನು ಭೂಮಿಯಿಂದ 400 ಕಿ.ಮೀ. ಎತ್ತರದ ಕಕ್ಷೆಯಲ್ಲಿ ಅಳವಡಿಸಲಾಗುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.