ಮಂಗಳೂರು ವಿವಿ: ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ನ. 14. 2024-25ನೇ ಸಾಲಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಆವರಣ ಮತ್ತು ಘಟಕ ಕಾಲೇಜುಗಳ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸುಗಳಿಗೆ ಅಗತ್ಯವಿರುವ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ 55% ಅಂಕಗಳು ಹಾಗೂ (ಪರಿಶಿಷ್ಟಜಾತಿ/ ಪರಿಶಿಷ್ಟಪಂಗಡದ ಅಭ್ಯರ್ಥಿಗಳಿಗೆ ಕನಿಷ್ಠ 50% ಅಂಕಗಳು), ಯು.ಜಿ.ಸಿ. ಎನ್.ಇ.ಟಿ./ಎಸ್.ಎಲ್.ಇ.ಟಿ. ಉತ್ತೀರ್ಣತೆ/ಎಂ.ಫಿಲ್/ಪಿ.ಹೆಚ್.ಡಿ. ಪದವಿ ಪ್ರಮಾಣಪತ್ರ ಹೊಂದಿದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ವಿಶ್ವವಿದ್ಯಾನಿಲಯದ ಅಧಿಕೃತ website ನಲ್ಲಿ ನೀಡಲಾದ Link http://faculty.mangaloreuniversity.in ರಲ್ಲಿ ಸಲ್ಲಿಸಬೇಕು.

ಅತಿಥಿ ಉಪನ್ಯಾಸಕರು ಬೇಕಾದ ವಿಷಯಗಳು:  ಇಂಗ್ಲೀಷ್ (UG), ಅರ್ಥಶಾಸ್ತ್ರ (PG), ಸಸ್ಯಶಾಸ್ತ್ರ (PG), ಸೈಬರ್ ಸೆಕ್ಯುರಿಟಿ (PG), ಕಂಪ್ಯೂಟರ್ ಸೈನ್ಸ್(UG/PG), ವಾಣಿಜ್ಯ ಶಾಸ್ತ್ರ (PG), (Specilization Finance Mgt) ಹಾಗೂ ಕೈಗಾರಿಕ ರಸಾಯನಶಾಸ್ತ್ರ (PG).

ಅರ್ಜಿ ಸಲ್ಲಿಸಲು ನ. 19 ರಂದು ಕೊನೆಯ ದಿನ. ನ.22 ರಂದು ಬೆಳಿಗ್ಗೆ 9 ಗಂಟೆಯಿಂದ ವಿಶ್ವವಿದ್ಯಾನಿಲಯ ಆಡಳಿತ ಸೌಧ, ಮಂಗಳ ಗಂಗೋತ್ರಿಯಲ್ಲಿ ಸಂದರ್ಶನ ನಡೆಯಲಿದೆ.

Also Read  ಕರಾವಳಿಯಲ್ಲಿ ವರುಣನ ಆರ್ಭಟ ➤ ಜೂ.23 ಮತ್ತು 24 ರಂದು ಆರೆಂಜ್ ಅಲರ್ಟ್

ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಎಲ್ಲಾ ಮೂಲ ದಾಖಲೆಗಳೊಂದಿಗೆ ಹಾಗೂ ದಾಖಲೆಯ ಜೆರಾಕ್ಸ್ ಪ್ರತಿಗಳೊಂದಿಗೆ ವಿಶ್ವವಿದ್ಯಾನಿಲಯ ಆಡಳಿತ ಸೌಧದಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು. ಕೊನೆಯ ದಿನಾಂಕದ ನಂತರ ಸ್ವೀಕೃತವಾದ ಮತ್ತು ಅಪೂರ್ಣ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಅತಿಥಿ ಉಪನ್ಯಾಸಕರ ನೇಮಕಾತಿಯನ್ನು ಯುಜಿಸಿ ನಿಗದಿಪಡಿಸಿದ ಮಾನದಂಡ ಹಾಗೂ ಕರ್ನಾಟಕ ಸರ್ಕಾರದ ಮೀಸಲಾತಿ ಆದೇಶದನುಸಾರ ಮಾಡಲಾಗುವುದು.
ಅಭ್ಯರ್ಥಿಗಳು ತಮ್ಮ ಇ-ಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಅರ್ಜಿಯಲ್ಲಿ ಕಡ್ಡಾಯವಾಗಿ ನಮೂದಿಸತಕ್ಕದ್ದು. ಆಯ್ಕೆಯಾದ ಅಭ್ಯರ್ಥಿಗಳು ಮಂಗಳೂರು ವಿಶ್ವವಿದ್ಯಾನಿಲಯದ ಯಾವುದೇ ಘಟಕ ಕಾಲೇಜುಗಳಲ್ಲಿ ಸೇವೆ ಸಲ್ಲಿಸಲು ಸಿದ್ಧರಿರಬೇಕು. ಅರ್ಜಿ ಶುಲ್ಕ ರೂ. 250/- ಹಾಗೂ (SC/ST/Cat-1 ಅಭ್ಯರ್ಥಿಗಳಿಗೆ ರೂ.125/)ನ್ನು ಮಂಗಳೂರು ವಿಶ್ವವಿದ್ಯಾನಿಲಯದ ವೆಬ್‍ಸೈಟ್: www.mangaloreuniversity.ac.in ನಲ್ಲಿರುವ ಆನ್‍ಲೈನ್ ಪೇಮೆಂಟ್ https://www.onlinesbi.sbi/sbicollect/payment/listcategory ಮುಖಾಂತರ ಪಾವತಿಸಿ e-Receipt ಅನ್ನು ಅರ್ಜಿಯೊಂದಿಗೆ ತಪ್ಪದೇ ಅಪ್‍ಲೋಡ್ ಮಾಡಬೇಕು.

Also Read  ಪೋಷಕರಿಗೆ ಗುಡ್ ನ್ಯೂಸ್ ➤ ಖಾಸಗಿ ಶಾಲಾ ಶುಲ್ಕದಲ್ಲಿ ಶೆ.35ರಷ್ಟು ಕಡಿತ ಸಾಧ್ಯತೆ..!

ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿ, ವಿಶ್ವವಿದ್ಯಾನಿಲಯದ ನಿರ್ಣಯವೇ ಅಂತಿಮವಾಗಿದೆ. ಅವಶ್ಯಕತೆ ಇದ್ದಲ್ಲಿ ಮಾತ್ರ ಅತಿಥಿ ಉಪನ್ಯಾಸಕರ ಆಯ್ಕೆ ಮಾಡುವ ಅಧಿಕಾರವನ್ನು ವಿಶ್ವವಿದ್ಯಾನಿಲಯ ಕಾಯ್ದಿರಿಸಿದೆ ಎಂದು ಮಂಗಳೂರು ವಿಶ್ವವಿದ್ಯಾಲಯ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top