ಸಿಂಧೂ ನದಿಗೆ ಉರುಳಿದ ಬಸ್: 26 ಮಂದಿ ಮೃತ್ಯು

(ನ್ಯೂಸ್ ಕಡಬ) newskadaba.com ಡೈಮರ್, . 13.  ಮದುವೆ ಮನೆಯಿಂದ ಜನರನ್ನು ಹೊತ್ತು ಬರುತ್ತಿದ್ದ ಬಸ್ ಸಿಂಧೂ ನದಿಗೆ ಉರುಳಿ ಬಿದ್ದು 26 ಮಂದಿ ಮೃತಪಟ್ಟ ಘಟನೆ ಪಾಕಿಸ್ತಾನದ ಉತ್ತರ ಗಿಲ್ಗಿಟ್-ಬಾಲ್ಟಿಸ್ತಾನ್ (ಜಿಬಿ) ಪ್ರದೇಶದಲ್ಲಿ ಸಂಭವಿಸಿದೆ.

ಬಸ್ 28 ಜನರನ್ನು ಹೊತ್ತೊಯ್ಯುತ್ತಿದ್ದ ಬಸ್ ಡೈಮರ್ ಜಿಲ್ಲೆಯ ಥಾಲಿಚಿ ಪ್ರದೇಶದಲ್ಲಿ ನದಿಗೆ ಉರುಳಿದೆ. ಸ್ಥಳೀಯರು ಮತ್ತು ರಕ್ಷಣಾ ತಂಡಗಳು ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದ್ದು, ಇಬ್ಬರ ಜೀವ ಉಳಿಸುವಲ್ಲಿ ಯಶಸ್ವಿಯಾದರು. ಇನ್ನು ಈ ಘಟನೆಗೆ ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಸಂತಾಪ ಸೂಚಿಸಿದ್ದಾರೆ. ಜೊತೆಗೆ ನಾಪತ್ತೆಯಾದವರನ್ನು ಪತ್ತೆ ಹಚ್ಚುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Also Read  ಕಾಸರಗೋಡು: ದಾಖಲೆ ರಹಿತ 18 ಲಕ್ಷ ರೂ. ಸಹಿತ ಓರ್ವನ ಬಂಧನ

 

error: Content is protected !!
Scroll to Top