ಮಂಗಳೂರು: ಕೊಟ್ಟಾರಿ ಪ್ರೀಮಿಯರ್ ಲೀಗ್ 2024- ಚಾಂಪಿಯನ್ ಪಟ್ಟಕ್ಕೇರಿದ ಕೊಟ್ಟಾರಿ ಮೈಟಿ ಬುಲ್ಸ್ ತಂಡ

(ನ್ಯೂಸ್ ಕಡಬ) newskadaba.com ಮಂಗಳೂರು, . 12. ಕೊಟ್ಟಾರಿ ಯುವ ವೇದಿಕೆಯ ಆಶ್ರಯದಲ್ಲಿ ಕೊಟ್ಟಾರಿ ಪ್ರೀಮಿಯರ್ ಲೀಗ್ 2024 ಸೀಸನ್ 5ರ ಕ್ರಿಕೆಟ್ ಪಂದ್ಯಾಟ ಎರಡು ದಿನಗಳ ಕಾಲ ನಗರದ ಉರ್ವ ಮೈದಾನದಲ್ಲಿ ನಡೆಯಿತು.

ಈ ಪಂದ್ಯಾಟದಲ್ಲಿ ಒಟ್ಟು ಏಳು ತಂಡಗಳು ಭಾಗವಹಿಸಿದ್ದವು. ಲೀಗ್ ಹಂತದಲ್ಲಿ ನಡೆದ ಪ್ರತೀ ತಂಡಕ್ಕೆ ಆರು ಪಂದ್ಯಾಟವಿತ್ತು. ಕ್ವಾಟರ್ ಫೈನಲ್, ಸೆಮಿ ಫೈನಲ್, ಫೈನಲ್ ಹಂತದಲ್ಲಿ ಪಂದ್ಯಾಟ ನಡೆಯಿತು. ಸೆಮಿ ಫೈನಲ್‌ನಲ್ಲಿ ನಾಲ್ಕು ತಂಡಗಳು ಪ್ರವೇಶ ಪಡೆದು ಪಂದ್ಯಾವಳಿಯ ಫೈನಲ್‌ನಲ್ಲಿ ಕೊಟ್ಟಾರಿ ತತ್ವಮಸಿ ಹಾಗೂ ಕೊಟ್ಟಾರಿ ಮೈಟಿ ಬುಲ್ಸ್ ತಂಡಗಳು ಮುಖಾಮುಖಿಯಾಯಿತು. ಟಾಸ್ ಜಯಿಸಿದ ಮೈಟಿ ಬುಲ್ಸ್ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಮೈಟಿ ಬುಲ್ಸ್ ವಿರುದ್ಧ ತತ್ವಮಸಿ ತಂಡ ನಾಲ್ಕು ಓವರ್ ಗಳಲ್ಲಿ 27ರನ್ ಗಳ ವಿಜಯದ ಗುರಿ ನೀಡಿತ್ತು. ಸರಳ ಗುರಿ ಬೆನ್ನಟ್ಟಿದ ಮೈಟಿ ಬುಲ್ಸ್ ತಂಡ ಕೊನೆಯ ಒವರ್ ನಲ್ಲಿ ಒಂದು ಬಾಲ್ ಇರುವಂತೆಯೇ ರೋಚಕ ಗೆಲುವು ಸಾಧಿಸಿತ್ತು.

Also Read  ರಾಜ್ಯಮಟ್ಟದ ಪವರ್ ಲಿಫ್ಟಿಂಗ್ ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ನಾಗೇಶ್ ಶೆಟ್ಟಿ

 

error: Content is protected !!
Scroll to Top