ನಟ ಶಾರುಖ್ ಖಾನ್‌ಗೆ ಬೆದರಿಕೆ ಹಾಕಿದ ವಕೀಲ ಫೈಜನ್‌ ಖಾನ್‌ ಅರೆಸ್ಟ್‌

crime, arrest, suspected

(ನ್ಯೂಸ್ ಕಡಬ) newskadaba.com ರಾಯ್ ಪುರ, . 12. ಬಾಲಿವುಡ್‌ ಬಾದ್‌ಶಾ ಶಾರುಖ್ ಖಾನ್‌ಗೆ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಛತ್ತೀಸ್‌ಗಢದ ರಾಯ್‌ಪುರದಲ್ಲಿ ವ್ಯಕ್ತಿಯೊಬ್ಬನನ್ನು ಮುಂಬೈ ಪೊಲೀಸರು ಇಂದು ಬಂಧಿಸಿದ್ದಾರೆ.

ಬಂಧಿತನನ್ನು ವಕೀಲ ಫೈಜನ್‌ ಖಾನ್‌ ಎಂದು ಗುರುತಿಸಲಾಗಿದ್ದು, ಈತ ಕಳೆದ ವಾರ ಬಾಂದ್ರಾ ಪೊಲೀಸ್ ಠಾಣೆಗೆ ಕರೆ ಮಾಡಿ ಶಾರುಖ್ ಖಾನ್ ಅವರನ್ನು ಬೆದರಿಸಿ ₹50 ಲಕ್ಷ ಬೇಡಿಕೆ ಇಟ್ಟಿದ್ದ. ಇನ್ನು ಬಂಧಿತ ಆರೋಪಿ ಫೈಜನ್‌ ಖಾನ್‌ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 308(4) (ಸಾವಿನ ಬೆದರಿಕೆ ಅಥವಾ ಗಂಭೀರ ಗಾಯದ ಸುಲಿಗೆ) ಮತ್ತು 351(3)(4) (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Also Read  ಮೂರೇ ದಿನದಲ್ಲಿ ಅದಾನಿಗೆ 5.56 ಲಕ್ಷ ಕೋಟಿ ರೂ. ನಷ್ಟ

 

error: Content is protected !!