ಗಂಡು ಮಗುವಿಗೆ ಜನನ ನೀಡಿದ ಅಭಿಷೇಕ್ ಅಂಬರೀಶ್‌ ಪತ್ನಿ ಅವಿವಾ

(ನ್ಯೂಸ್ ಕಡಬ) newskadaba.com ಬೆಂಗಳೂರು, . 12. ಸ್ಯಾಂಡಲ್‌ವುಡ್‌ ಸ್ಟಾರ್ ಅಭಿಷೇಕ್ ಅಂಬರೀಶ್‌ ಹಾಗೂ ಅವಿವಾ ಬಿದಪ್ಪ ದಂಪತಿಗೆ ಗಂಡು ಮಗು ಜನಿಸಿದೆ. ಇಂದು (ನ 12) ಮಗು ಜನಿಸಿದೆ. ಮಗುವಿನ ಜೊತೆ ಸುಮಲತಾ ಅಂಬರೀಷ್ ಅವರು ಪೋಸ್ ಕೊಟ್ಟಿದ್ದು, ಈ ಫೋಟೋ ವೈರಲ್ ಆಗಿದೆ.

ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಅಭಿಷೇಕ್-‌ ಅವಿವಾ 2023ರಲ್ಲಿ ವಿವಾಹ ಆಗಿದ್ದರು. ಇವರ ಮದುವೆ ಅದ್ದೂರಿಯಾಗಿ ನೆರವೇರಿತ್ತು. ಈಗ ಕುಟುಂಬದಿಂದ ಖುಷಿಯ ಸುದ್ದಿ ಹೊರ ಬಂದಿದೆ. ರೆಬೆಲ್ ಸ್ಟಾರ್ ಅಂಬರೀಷ್ ಮನೆಯಲ್ಲಿ ಈಗ ಖುಷಿ ಮನೆ ಮಾಡಿದೆ. ‌

Also Read  ಜಯ ಕರ್ನಾಟಕ, ವಿದ್ಯಾಮಾತಾ ಫೌಂಡೇಶನ್ ವತಿಯಿಂದ ವನಮಹೋತ್ಸವ

 

error: Content is protected !!
Scroll to Top