ಬಿಜೆಪಿ-ಜೆಡಿಎಸ್ ಗ್ಯಾರಂಟಿ ನಿಲ್ಲಿಸಲು ಸಂಚು ರೂಪಿಸುತ್ತಿದೆ: ಡಿಕೆಶಿ

(ನ್ಯೂಸ್ ಕಡಬ) newskadaba.com ನ. 09.ಬೆಂಗಳೂರು: ಗೃಹಲಕ್ಷ್ಮಿ ಯೋಜನೆ ಸೇರಿದಂತೆ ಕಾಂಗ್ರೆಸ್‌‍ ಸರ್ಕಾರದ ಎಲ್ಲಾ ಯೋಜನೆಗಳನ್ನು ನಿಲ್ಲಿಸಲು ಬಿಜೆಪಿ-ಜೆಡಿಎಸ್‌‍ ಮೈತ್ರಿಕೂಟವು ಸಂಚು ನಡೆಸಿದೆ. ಆದರೆ ಇದು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೇಗಾದರೂ ಮಾಡಿ ಗ್ಯಾರಂಟಿಗಳನ್ನು ನಿಲ್ಲಿಸಲು ಬಿಜೆಪಿಯವರು ಪ್ರಯತ್ನಿಸುತ್ತಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು ಅದನ್ನೇ ಹೇಳಿದ್ದಾರೆ. ಆದರೆ ಗ್ಯಾರಂಟಿ ನಿಲ್ಲಿಸಲು ಅವರ ಹಣೆಯಲ್ಲಿ ಬರೆದಿಲ್ಲ ಎಂದು ತಿರುಗೇಟು ನೀಡಿದರು. ಜನ ಹುಷಾರಾಗಿರಬೇಕು. ತಾಯಂದಿರು ಉತ್ತಮವಾದ ಬದುಕು ನಡೆಸಲಿ ಎಂದು ಗೃಹಲಕ್ಷ್ಮಿಯನ್ನು ನೀಡಲಾಗುತ್ತಿದೆ. ಇದನ್ನು ನಿಲ್ಲಿಸಲು ಬಿಜೆಪಿ ಮತ್ತು ಜೆಡಿಎಸ್‌‍ ಪಕ್ಷಗಳು ಒಟ್ಟಾಗಿ ಯತ್ನಿಸುತ್ತಿವೆ ಎಂದು ಹೇಳಿದರು.

Also Read  ಕೇಂದ್ರದ ಬಗ್ಗೆ ಅಪಹಾಸ್ಯ ಮಾಡಲು ಮೋದಿಯವರಿಗೆ ನಾಚಿಗೆಯಾಗಬೇಕು ► ಎಡವಟ್ಟು ಮಾಡಿಕೊಂಡ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ

error: Content is protected !!
Scroll to Top