ಬೇಟೆಗೆಂದು‌ ಕರಿಂಜ ಕಾಡಿಗೆ ತೆರಳಿ ನಾಪತ್ತೆಯಾಗಿದ್ದವರ ಮೃತದೇಹ ಪತ್ತೆ ► ಸಂಶಯಕ್ಕೀಡುಮಾಡಿದ ನಿಗೂಢ ಸಾವು

(ನ್ಯೂಸ್ ಕಡಬ) newskadaba.com ಮೂಡುಬಿದಿರೆ, ಮಾ.22. ಕಳೆದ ಮೂರು ದಿನಗಳ ಹಿಂದೆ ಇಲ್ಲಿಗೆ ಸಮೀಪದ ಕರಿಂಜ ಕಾಡಿಗೆ ಬೇಟೆಗೆಂದು ತೆರಳಿ ನಾಪತ್ತೆಯಾಗಿದ್ದ ಇಬ್ಬರ ಮೃತದೇಹಗಳು ಗುರುವಾರದಂದು ಕರಿಂಜೆ ಗದ್ದೆಯ ಬಳಿ ಪತ್ತೆಯಾಗಿದೆ.

ಮೃತರನ್ನು ಕರಿಂಜೆಯ ಕಕ್ಕೆಬೆಟ್ಟು ನಿವಾಸಿ ಕೃಷಿಕರಾಗಿರುವ ಪ್ರವೀಣ್ ತೌರೋ (32) ಮತ್ತು ಪ್ರಾಂತ್ಯ ಗ್ರಾಮದ ಪೇಪರ್‌ಮಿಲ್‌ ನಿವಾಸಿ ಉದ್ಯಮಿ ಗ್ರೇಶನ್ ರೊಡ್ರಿಗಸ್ (34) ಎಂದು ಗುರುತಿಸಲಾಗಿದೆ. ಇವರು ಮಂಗಳವಾರ ರಾತ್ರಿ ಬೇಟೆಗೆಂದು ತೆರಳಿದ್ದು, ನಂತರ ನಾಪತ್ತೆಯಾಗಿದ್ದರು. ಆದರೆ ಆದರೆ ಬೇಟೆಗೆಂದಜ ಮನೆಯಿಂದ ತೆರಳಿದ್ದ ಬೊಲೇರೋ ಕಾಡಿನ ಸಮೀಪದ ಮನೆಯ ಬಳಿ ಪತ್ತೆಯಾದ ಕಾರಣ ಮನೆಯವರು ಗಾಬರಿಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ಇಂದು ಬೆಳಗ್ಗೆಯಿಂದ ಸ್ಥಳೀಯರು ಅರಣ್ಯ ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದು, ಸಂಜೆಯ ವೇಳೆಗೆ ಗದ್ದೆಯ ಬದಿಯಲ್ಲಿ ಇಬ್ಬರ ಮೃತದೇಹಗಳು, ಪಕ್ಕದಲ್ಲಿ ಟಾರ್ಚ್‌ಲೈಟ್, ನೀರಿನ ಬಾಟಲಿ ಮತ್ತು ಕೋವಿ ಪತ್ತೆಯಾಗಿದೆ. ಆದರೆ ಘಟನೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲದಿದ್ದು, ಕಾರಣ ನಿಗೂಢವಾಗಿದೆ‌.

Also Read  ಪುತ್ತೂರು: ಆಕ್ಟಿವಾ ಮತ್ತು ಟಿಪ್ಪರ್ ನಡುವೆ ಢಿಕ್ಕಿ ➤ ಚಾಕೋಲೇಟ್ ಸಂಸ್ಥೆಯ ಮಾರ್ಕೆಟಿಂಗ್ ಮ್ಯಾನೇಜರ್ ಮೃತ್ಯು

ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top