(ನ್ಯೂಸ್ ಕಡಬ) newskadaba.com ನ. 09. ಕೊಣಾಜೆ ಪೊಲೀಸ್ ಠಾಣೆಯಲ್ಲಿ ದಾಖಲಾದ ವಿವಿಧ ಪ್ರಕರಣಗಳಲ್ಲಿ ಸ್ವಾಧೀನ ಪಡಿಸಿಕೊಂಡು ಠಾಣಾ ಆವರಣದಲ್ಲಿ ಇರಿಸಲಾದ ವಾರಿಸುದಾರರು ಪತ್ತೆಯಾಗದ ಹಾಗೂ ಪ್ರಕರಣದಲ್ಲಿ ವಾರಿಸುದಾರರು ಈವರೆಗೂ ಬಾರದೇ ಶಿಥಿಲಾವಸ್ಥೆಗೆ ತಲುಪಿದ ಹಳೆಯ ವಾಹನಗಳ ವಿಲೇವಾರಿಗೆ ನ್ಯಾಯಾಲಯ ಹಾಗೂ ಮೇಲಾಧಿಕಾರಿಗಳು ಆದೇಶಿಸಿದ್ದು, ವಾಹನಗಳನ್ನು ನವೆಂಬರ್ 9 ರಂದು ಸಂಜೆ 4 ಗಂಟೆಗೆ ಕೊಣಾಜೆ ಪೊಲೀಸ್ ಠಾಣಾ ಆವರಣದಲ್ಲಿ ಬಹಿರಂಗ ಹರಾಜು ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಕೊಣಾಜೆ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ವಾಹನಗಳ ಬಹಿರಂಗ ಹರಾಜು
