ನ.12ರಂದು ಜಿಲ್ಲಾ ಬಾಲಭವನದಲ್ಲಿ ಮಕ್ಕಳಿಗೆ ವಿವಿಧ ಸ್ಪರ್ಧೆಗಳು

(ನ್ಯೂಸ್ ಕಡಬ) newskadaba.com ನ. 08. ಬಾಲಭವನ ಸೊಸೈಟಿ ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಬಾಲಭವನ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ದ.ಕ ಜಿಲ್ಲೆ, ಇವರ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಮಕ್ಕಳ ದಿನಾಚರಣೆ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ 9 ರಿಂದ 16 ವರ್ಷದ ಒಳಗಿನ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಜಿಲ್ಲಾ ಬಾಲಭವನ ಕದ್ರಿಯಲ್ಲಿ ನವೆಂಬರ್ 12ರಂದು ಆಯೋಜಿಸಲಾಗಿದೆ.

1) ಸೃಜನಾತ್ಮಕ ಪ್ರದರ್ಶನ ಕಲೆಗಳಾದ ಶಾಸ್ತ್ರೀಯ ನೃತ್ಯ, ಜಾನಪದ ನೃತ್ಯ, ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ (ಸಂಗೀತ ಹಾಗೂ ನೃತ್ಯ ಎರಡು ಪ್ರಕಾರಗಳನ್ನು ಪ್ರದರ್ಶಿಸಲು ಪರಿಣತಿ ಹೊಂದಿರಬೇಕು) 2) ವಾದ್ಯ ಸಂಗೀತ, ತಬಲಾ, ಮೃದಂಗ, ಕೀಬೋರ್ಡ್, ಕೊಳಲು, ಡೊಳ್ಳು ಮತ್ತು ನಗಾರಿ 3) ವಿಜ್ಞಾನದಲ್ಲಿ ಸೃಜನಾತ್ಮಕ ಆವಿಷ್ಕಾರ ಹಾಗೂ 4) ಚಿತ್ರಕಲಾ ಸ್ಪರ್ಧೆಗಳು ನಡೆಯಲಿದೆ.

Also Read  ರಾಜ್ಯದಲ್ಲಿ ಗುಟ್ಕಾ, ಪಾನ್ ಮಸಾಲಾ, ತಂಬಾಕು ಮಾರಾಟಕ್ಕೆ ಬ್ರೇಕ್ .?!

ವಿದ್ಯಾರ್ಥಿಯ ವಯಸ್ಸನ್ನು ಶಾಲಾ ಮುಖ್ಯಸ್ಥರ ದೃಢೀಕರಣದೊಂದಿಗೆ ಸಲ್ಲಿಸಬೇಕು. ಆಸಕ್ತ ಮಕ್ಕಳು ನವೆಂಬರ್ 11ರ ಮಧ್ಯಾಹ್ನದೊಳಗಾಗಿ ಹೆಸರನ್ನು ನೋಂದಾಯಿಸಲು ಸೂಚಿಸಿದೆ. ಅಲ್ಲದೇ ಒಂದು ಮಗು ಒಂದು ಸ್ಪರ್ಧೆಯಲ್ಲಿ ವೈಯಕ್ತಿಕವಾಗಿ ಭಾಗವಹಿಸಲು ಮಾತ್ರ ಅವಕಾಶವಿದೆ.

ಹೆಚ್ಚಿನ ಮಾಹಿತಿಗೆ ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಸ್ತ್ರೀ ಶಕ್ತಿ ಭವನ, ಎರಡನೇ ಮಹಡಿ, ಬಿಜೈ, ಮಂಗಳೂರು ಸಂಪರ್ಕಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಆತೂರು: ಹಫ್ವಾ ಕುಟುಂಬ ಸಮ್ಮಿಲನ-2020 ➤ ಸಂಘಟಿತ ಕುಟುಂಬ ಸಂಬಂಧದಿಂದ ಸಮುದಾಯ ಸಬಲೀಕರಣ ಸಾಧ್ಯ-ಹೆಚ್. ಮಹಮ್ಮದ್ ಆಲಿ

error: Content is protected !!
Scroll to Top