(ನ್ಯೂಸ್ ಕಡಬ) newskadaba.com ಲಕ್ನೋ ನ. 07: ಮಹಿಳೆಯರ ಸುರಕ್ಷತೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಉತ್ತರ ಪ್ರದೇಶ ರಾಜ್ಯ ಮಹಿಳಾ ಆಯೋಗ ಕೆಲವು ಕ್ರಾಂತಿಕಾರಕ ಪ್ರಸ್ತಾವನೆ ಸಲ್ಲಿಸಿದೆ. ಇನ್ನು ಇನ್ನು ಮುಂದೆ ಪುರುಷ ಟೈಲರ್ ಗಳು ಮಹಿಳೆಯರ ಉಡುಪಿನ ಅಳತೆಯನ್ನು ಪಡೆಯುವಂತಿಲ್ಲ ಎನ್ನುವುದು ಇವುಗಳ ಪೈಕಿ ಒಂದಾದರೆ, ಪುರುಷ ತರಬೇತುದಾರರು ಮಹಿಳೆಯರಿಗೆ ಜಿಮ್ ಅಥವಾ ಯೋಗ ತರಭೇತಿ ನಡೆಸುವಂತಿಲ್ಲ ಎನ್ನುವುದು ಈ ಪ್ರಸ್ತಾವನೆಯಲ್ಲಿದೆ.
“ಸಾರ್ವಜನಿಕ ಮತ್ತು ವಾಣಿಜ್ಯ ಪ್ರದೇಶಗಳಲ್ಲಿ ಮಹಿಳೆಯರ ಭದ್ರತೆಯನ್ನು ಸುಧಾರಿಸುವ” ಉದ್ದೇಶದ ಸುರಕ್ಷಾ ಮಾರ್ಗಸೂಚಿಗಳ ಕುರಿತಂತೆ ಮಹಿಳಾ ಆಯೋಗವು ಪ್ರಸ್ತಾವನೆ ಸಲ್ಲಿಸಿದೆ. ಶಾಲಾ ಬಸ್ ಗಳಲ್ಲಿ ಮಹಿಳಾ ಭದ್ರತಾ ಸಿಬ್ಬಂದಿ ಇರುವಂತೆಯೂ ಆಯೋಗ ಶಿಫಾರಸ್ಸು ಮಾಡಿದೆ. ಅಕ್ಟೋಬರ್ 28ರಂದು ಲಕ್ನೋದಲ್ಲಿ ನಡೆದ ಮಹಿಳಾ ಆಯೋಗದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದ್ದು, ಮಹಿಳೆಯರ ಸುರಕ್ಷತೆಗೆ ಹಲವು ಕ್ರಮಗಳ ಸಾಧ್ಯತೆಗಳನ್ನು ಸದಸ್ಯರು ಪರಿಶೀಲಿಸಿದರು ಎಂದು ತಿಳಿದುಬಂದಿದೆ.