ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ..!

Death, deadbody, Waterfall

(ನ್ಯೂಸ್ ಕಡಬ) newskadaba.com ಮಂಗಳೂರು, ನ. 08. ಕಳೆದ ಕೆಲ ದಿನಗಳಿಂದ ನಾಪತ್ತೆಯಾಗಿದ್ದ ಕಿನ್ನಿಗೋಳಿ ಪಟ್ಟಣ ಪಂಚಾಯತ್‌ನ ಮೆನ್ನಬೆಟ್ಟು ಗ್ರಾಮದ ಮಾರಡ್ಕ ನಿವಾಸಿ ರವಿ (34) ಎಂಬವರು ಗುರುವಾರ ಸಂಜೆ ಮನೆಯ ಪಕ್ಕದ ಹೊಂಡದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ನ. 2 ರ ಬೆಳಿಗ್ಗೆ 10 ಗಂಟೆಗೆ ಮನೆಯಿಂದ ಪೇಟೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುವ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ರವಿ ಅವರ ಮೊಬೈಲ್ ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಬಂದಿದ್ದು, ನ. 6 ರಂದು ಮನೆಯವರು ಮನೆಯ ಮಾಲೀಕರಿಗೆ ತಿಳಿಸಿ ಬಳಿಕ ಅವರು ನೆರೆಹೊರೆಯವರಲ್ಲಿ, ಸಂಬಂಧಿಕರಲ್ಲಿ ವಿಚಾರಿಸಿದ್ದಾರೆ. ಬಳಿಕ ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುವ ಬಗ್ಗೆ ರವಿಯವರ ಪತ್ನಿ ಶ್ವೇತಾರವರು ಮುಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

Also Read  ಭೂ ಸುಧಾರಣಾ ಕಾಯ್ದೆಯಿಂದ ಅತ್ಯಧಿಕ ಪ್ರಯೋಜನ ಪಡೆದ ಜಿಲ್ಲೆ ದಕ್ಷಿಣ ಕನ್ನಡ - ಜಿ.ಪಂ ಸಿಇಓ

 

error: Content is protected !!
Scroll to Top