ಆರೋಪಿ ಪವಿತ್ರಾಗೌಡ ಜಾಮೀನು ಅರ್ಜಿ ವಿಚಾರಣೆ ನ.21ಕ್ಕೆ ಮುಂದೂಡಿದ ಹೈಕೋರ್ಟ್

(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 07. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿ ಪವಿತ್ರಾಗೌಡ ಸೇರಿದಂತೆ ಐವರ ಜಾಮೀನು ಅರ್ಜಿ ವಿಚಾರಣೆಯನ್ನು ನ.21 ಕ್ಕೆ ಹೈಕೋರ್ಟ್ ಮುಂದೂಡಿದೆ.

ಪವಿತ್ರಾಗೌಡ, ನಾಗರಾಜ್, ಲಕ್ಷ್ಮಣ್, ಅನುಕುಮಾರ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಕೋರ್ಟ್ಗೆ ಆಗಮಿಸಿದ್ದ ಪವಿತ್ರಾಗೌಡ ತಾಯಿ, ಮಗಳಿಗೆ ಜಾಮೀನು ಸಿಗದ ಹಿನ್ನಲೆಯಲ್ಲಿ ಬೇಸರದಿಂದಲೇ ಹೊರನಡೆದರು. ಕೊಲೆ ಪ್ರಕರಣದಲ್ಲಿ ಎ2 ಆರೋಪಿ ದರ್ಶನ್ ಜಾಮೀನು ಅರ್ಜಿಯೂ 21 ಕ್ಕೆ ವಿಚಾರಣೆಯಲ್ಲಿದೆ. ಸದ್ಯ ಮಧ್ಯಂತರ ಜಾಮೀನು ಪಡೆದು ದರ್ಶನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Also Read  ಪತ್ನಿ ಸಾವನ್ನಪ್ಪಿದ್ದಾಳೆಂದು ಭಾವಿಸಿದ ಪತಿ ► ಪೊಲೀಸರಿಗೆ ಹೆದರಿ ಆತ್ಮಹತ್ಯೆ...!!!

error: Content is protected !!
Scroll to Top