ಪರಿಹಾರ ಯೋಜನೆ ವಿಫಲ – ಜೆಟ್ ಏರ್ವೇಸ್ ಮುಚ್ಚಲು ಸುಪ್ರೀಂ ಕೋರ್ಟ್ ಆದೇಶ

(ನ್ಯೂಸ್ ಕಡಬ) newskadaba.com ನ. 07. ಕಳೆದ ಐದು ವರ್ಷಗಳ ಅವಧಿಯಲ್ಲಿ ಜೆಟ್ ಏರ್‌ವೇಸ್ ನ ಪರಿಹಾರ ಯೋಜನೆಯನ್ನು ಕಾರ್ಯಗತಗೊಳಿಸಲು ವಿಫಲವಾದ ಹಿನ್ನೆಲೆ ಜೆಟ್ ಏರ್ ವೇಸ್ ನ್ನು ಮಿಚ್ಚಲು ಸುಪ್ರೀಂ ಕೋರ್ಟ್ ಗುರುವಾರದಂದು ನಿರ್ದೇಶನ ನೀಡಿದೆ. ಸುಪ್ರೀಂ ಕೋರ್ಟ್ ಸಂವಿಧಾನದ 142ನೇ ವಿಧಿಯ ಅಡಿಯಲ್ಲಿ ತನ್ನ ಅಸಾಧಾರಣ ಅಧಿಕಾರವನ್ನು ಬಳಸಿಕೊಂಡಿತ್ತು.

ಪರಿಹಾರ ಯೋಜನೆಗೆ ಅನುಗಿಣವಾಗಿ ಸಂಪೂರ್ಣ ಪಾವತಿ ಮಾಡದೇ ಜೆಟ್ ಏರ್ ವೇಸ್ ನ ಮಾಲೀಕತ್ವವನ್ನು ಯಶಸ್ವಿ ಪರಿಹಾರ ಅರ್ಜಿದಾರರಿಗೆ ವರ್ಗಾಯಿಸಲು ಅನುಮತಿ ನೀಡಿದ ಎನ್ಸಿಎಲ್‌ಎಟಿ (ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ) ಆದೇಶವನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿ ಜೆ.ಬಿ.ಪರ್ಡಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠವು ತಳ್ಳಿಹಾಕಿತು.

error: Content is protected !!