ನಡೆದುಕೊಂಡು ಹೋಗುತ್ತಿದ್ದ ಯೂಟ್ಯೂಬ್ ವ್ಲಾಗರ್’ಗೆ ಲೈಂಗಿಕ‌ ಕಿರುಕುಳ..!

(ನ್ಯೂಸ್ ಕಡಬ) newskadaba.com ನ. 07. ಕೆಲಸ ಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದ ಉತ್ತರ ಭಾರತ ಮೂಲದ ವ್ಲಾಗರ್ ಗೆ ಸೈಕಲ್‌ ಸವಾರನೊಬ್ಬ ಅಸಭ್ಯ ವರ್ತನೆ ತೋರಿದ ಘಟನೆ ರಾಜಧಾನಿಯ ಬಿಟಿಎಂ ಲೇಔಟ್‌ ನಲ್ಲಿ ನಡೆದಿದೆ.


ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ನೇಹಾ ಬಿಸ್ವಾಲ್‌ ಎಂಬಾಕೆ ಬಿಟಿಎಂ ಲೇಔಟ್‌ನಲ್ಲಿ ವಾಸವಾಗಿದ್ದರು. ಮಂಗಳವಾರದಂದು ಕೆಲಸ ಮುಗಿಸಿಕೊಂಡು ರಾತ್ರಿ 8 ಗಂಟೆಗೆ ಹಿಂತಿರುಗುವ ವೇಳೆ ಸೆಲ್ಫಿ ವಿಡಿಯೋ ಮಾಡಿಕೊಂಡು ಹೋಗುತ್ತಿದ್ದರು. ಅದೇ ವೇಳೆ ಸೈಕಲ್‌ ನಲ್ಲಿ ಬಂದ ಯುವಕನೊಬ್ಬ ಆಕೆಯ ಮೈಮುಟ್ಟಿ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.

Also Read  ಚಾಲಕನ ಅತಿವೇಗದ ಪರಿಣಾಮ ಸುಳ್ಯದಲ್ಲಿ ಸರಣಿ ಅಪಘಾತ

ಇದರಿಂದ ಬೇಸರಗೊಂಡ ಯುವತಿ, ನಗರದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲವೇ? ಎಂದು ಪ್ರಶ್ನಿಸಿ ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣ ಇನ್‌ ಸ್ಟ್ರಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಪೊಲೀಸರು, ಸಮೀಪದ ಠಾಣೆಗೆ ದೂರು ನೀಡುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

error: Content is protected !!
Scroll to Top