ಸುಪ್ರೀಂ ಕೋರ್ಟ್ ನ ಬೇಸಿಗೆ ರಜಾ ರದ್ದುಗೊಳಿಸಿದ ಡಿವೈ ಚಂದ್ರಚೂಡ್

(ನ್ಯೂಸ್ ಕಡಬ) newskadaba.com ನ.07. ನಿವೃತ್ತಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ಬೇಸಿಗೆ ರಜೆಯನ್ನು ರದ್ದುಗೊಳಿಸಿದ್ದಾರೆ.


2025ರ ನ್ಯಾಯಾಲಯದ ಕ್ಯಾಲೆಂಡರ್ ಬೇಸಿಗೆ ರಜಾದಿನಗಳನ್ನು ಭಾಗಶಃ ಕೆಲಸದ ದಿನಗಳು ಎಂದು ಬದಲಾವಣೆ ಮಾಡಿ, ಈ ತಿದ್ದುಪಡಿ ನಿಯಮಗಳನ್ನು ತಕ್ಷಣವೇ ಜಾರಿಗೆ ತಂದಿದೆ.


ತಿದ್ದುಪಡಿ ನಿಯಮಗಳ ಪ್ರಕಾರ, 2025ರ ಮೇ 26ರಿಂದ ಭಾಗಶಃ ಕೆಲಸದ ದಿನಗಳು ಎಂದು ಮಾಡಲಾಗಿದೆ. ಅದಾದ ಬಳಿಕ 2025 ಜುಲೈ 14 ರಿಂದ ಪೂರ್ಣ ಕೆಲಸದ ದಿನಗಳು ಪುನಾರಂಭಗೊಳ್ಳುತ್ತವೆ. 2022ರ ನವೆಂಬರ್ 9ರಂದು ಅಧಿಕಾರ ವಹಿಸಿಕೊಂಡ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರ ಅಧಿಕಾರ ನವೆಂಬರ್ 10 ರಂದು ಅಂತ್ಯಗೊಳ್ಳಲಿದೆ. ಪ್ರಸ್ತುತ ಸುಪ್ರೀಂ ಕೋರ್ಟ್ ನಲ್ಲಿ ಅತ್ಯಂತ ಹಿರಿಯ ನ್ಯಾಯಾಧೀಶರಾಗಿರುವ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ.

error: Content is protected !!
Scroll to Top