(ನ್ಯೂಸ್ ಕಡಬ) newskadaba.com ಮುಂಬೈ, ನ. 07 . ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2 ಬ್ಯಾಂಕ್‌ಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ ದಂಡ ವಿಧಿಸಿದೆ. ದಂಡಕ್ಕೆ ತುತ್ತಾಗಿರುವ ಎರಡೂ ಬ್ಯಾಂಕ್‌ಗಳು ಬೇರೆ ರಾಜ್ಯಗಳಲ್ಲಿ ಲೊಕೇಟ್ ಆಗಿವೆ. ಬ್ಯಾಂಕಿಂಗ್ ನಿಯಮದ ಉಲ್ಲಂಘನೆ ಹಿನ್ನೆಲೆ ರಿಸರ್ವ್ ಬ್ಯಾಂಕ್ ದಂಡ ವಿಧಿಸಿದೆ. ಎರಡು ಬ್ಯಾಂಕ್‌ಗಳಿಗೆ ದಂಡ ವಿಧಿಸಿರುವ ಮಾಹಿತಿಯನ್ನು ನವೆಂಬರ್ 4ರಂದು ಆರ್‌ಬಿಐ ನೀಡಿದೆ.
ಮಾಹಾರಾಷ್ಟ್ರದ ಉದಗಿರ್‌ನ ಸಹಯೋಗ ಅರ್ಬನ್ ಕೊ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಮತ್ತು ಮೇಘಾಲಯದ ತುರಾದಲ್ಲಿರುವ ತುರಾ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಬ್ಯಾಂಕಿಂಗ್ ನಿಯಮಗಳನ್ನು ಉಲ್ಲಂಘಿಸಿದ್ದು, ದಂಡಕ್ಕೆ ಗುರಿಯಾಗಿವೆ. ಸಹಯೋಗ ಅರ್ಬನ್ ಕೊ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್‌ಗೆ 1.5 ಲಕ್ಷ ರೂಪಾಯಿ ಮತ್ತು ತುರಾ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್‌ಗೆ 1 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಬ್ಯಾಂಕಿಂಗ್ ರೆಗ್ಯೂಲೇಷನ್ ಆಕ್ಟ್ 1949ರ ಸೆಕ್ಷನ್ 46 (4) (i), 56 ಮತ್ತು 47 A (1) (C) ಅಡಿಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದಂಡ ಹಾಕಿದೆ.