SC, ST ವಿದ್ಯಾರ್ಥಿಗಳಿಗೆ ನೀಡುವ ಪ್ರೋತ್ಸಾಹಧನದಲ್ಲಿ 1 ಲಕ್ಷ ಹೆಚ್ಚಳ

(ನ್ಯೂಸ್ ಕಡಬ) newskadaba.com ನವದೆಹಲಿ, . 07 ಬೆಂಗಳೂರು. ರಾಜ್ಯ ಸರ್ಕಾರವು  ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವರ್ಗದ  ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಿದೆ. ಐಐಟಿ ಸೇರಿ ಇತರೆ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವವರಿಗೆ ನೀಡುವ ಪ್ರೋತ್ಸಾಹಧನವನ್ನು ರೂ.1 ಲಕ್ಷದಿಂದ 2 ಲಕ್ಷಕ್ಕೆ ಹೆಚ್ಚಿಸಿ ಆದೇಶಿಸಿದೆ.

ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಾದ ಐ.ಐ.ಟಿ /ಐ.ಐ.ಎಂ/ಐ.ಐ.ಎಸ್.ಸಿ/ಎನ್.ಐ.ಟಿ ಮುಂತಾದ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ೆಸ್, ಎಸ್ಟಿ ವಿದ್ಯಾರ್ಥಿಗಳಿಗೆ ಒಂದು ಬಾರಿ ನೀಡುವ ಪ್ರೋತ್ಸಾಹಧನವನ್ನು ರೂ.1.00 ಲಕ್ಷಗಳಿಂದ ರೂ.2.00 ಲಕ್ಷಗಳಿಗೆ ಹೆಚ್ಚಿಸಿ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.

ಪಿ.ಯು.ಸಿಯಲ್ಲಿ ಶೇಕಡ 95 ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದು NEET ಮೂಲಕ ಸರ್ಕಾರಿ ಕೋಟಾದಡಿ ಪ್ರವೇಶ ಪಡೆಯದೆ, ಆಡಳಿತ ಮಂಡಳಿಯ ಕೋಟಾದಡಿ MBBSಗೆ ಪ್ರವೇಶ ಪಡೆದಿರುವ ಪ್ರತಿಭಾನ್ವಿತ ಪರಿಶಿಷ್ಟ ಜಾತಿ ವಿದ್ಯಾಥಿಗಳಿಗೆ ಮೊದಲನೇ ವರ್ಷದಲ್ಲಿ ರೂ. 25.00 ಲಕ್ಷಗಳನ್ನು ಕಾಲೇಜು ಶುಲ್ಕವಾಗಿ ಪಾವತಿಸಲಿದೆ.ವಿದ್ಯಾರ್ಥಿಯು MBBS ಮೊದಲನೇ ವರ್ಷದ ಪರೀಕ್ಷೆಯಲ್ಲಿ ಕನಿಷ್ಟ ಶೇಕಡ 60 ಅಂಕಗಳನ್ನು ಪಡೆದು ತೇರ್ಗಡೆಯಾದಲ್ಲಿ, ಪುನಃ ರೂ.25.00 ಲಕ್ಷಗಳ ಪ್ರೋತ್ಸಾಹಧನವನ್ನು ಮಂಜೂರು ಮಾಡುವ ಅಂಶವನ್ನು ಸೇರ್ಪಡೆ ಮಾಡಿ ಆದೇಶಿಸಲಾಗಿದೆ.

Also Read  'ವಿಟ್ಲದಲ್ಲಿ ನಡೆದ ಅತ್ಯಾಚಾರವನ್ನು ಮಂಗಳೂರು ಫೈಲ್ಸ್ ಎಂದು ಕರೆಯಬಹುದೇ' ? - ಸಚಿವ ದಿನೇಶ್ ಗುಂಡೂರಾವ್ ತಿರುಗೇಟು

error: Content is protected !!
Scroll to Top