ನಿಲ್ಲಿಸಿದ್ದ ವಾಹನ ಹಿಮ್ಮುಖ ಚಲಿಸಿ ಮಗು ಮೃತ್ಯು..!

(ನ್ಯೂಸ್ ಕಡಬ) newskadaba.com ಬಂಟ್ವಾಳ, ನ. 07. ನಿಲ್ಲಿಸಿದ್ದ ವಾಹನ ಹಿಮ್ಮುಖವಾಗಿ ಚಲಿಸಿ ಹಿಂಬದಿ ಆಟವಾಡುತ್ತಿದ್ದ ಮಗು ವಾಹನದಡಿ ಸಿಲುಕಿ ಮೃತಪಟ್ಟ ಘಟನೆ ಲೊರೆಟ್ಟೊಪದವಿನಲ್ಲಿ ಬುಧವಾರ ನಡೆದಿದೆ.

ಮೃತಪಟ್ಟ ಬಾಲಕಿಯನ್ನು ಫರಂಗಿಪೇಟೆ ಸಮೀಪದ ಪತ್ತನಬೈಲ್ ನಿವಾಸಿಯಾಗಿದ್ದ ಉನೈಸ್ ಮತ್ತು ಆಶೂರಾ ದಂಪತಿ ಪುತ್ರಿ ಮೂರುವರೆ ವರ್ಷದ ಆಶೀಕಾ ಎಂದು ಗುರುತಿಸಲಾಗಿದೆ. ಟಿಪ್ಪುನಗರದ ಮನೆಯಲ್ಲಿ ಆಟವಾಡುತ್ತಿದ್ದ ವೇಳೆ ನಿಲ್ಲಿಸಿದ್ದ ಟೆಂಪೋ ವಾಹನ ರಿವರ್ಸ್ ಬಂದಿದೆ. ಈ ವೇಳೆ ಮಗುವಿನ ಮೇಲೆ ವಾಹನ ಹಾದು ಹೋಗಿದ್ದು, ಮಗುವನ್ನು ಆಸ್ಪತ್ರೆಗೆ ಕೊಂಡೊಯ್ದರೂ ಫಲಕಾರಿಯಾಗಲಿಲ್ಲ. ವಾಹನ ಯಾವ ಕಾರಣದಿಂದ ಹಿಂದಕ್ಕೆ ಬಂದು ಎಂಬ ಕುರಿತು ಸ್ಪಷ್ಟ ಮಾಹಿತಿ ದೊರೆತಿಲ್ಲ. ಬಂಟ್ವಾಳ ನಗರ ಠಾಣಾ ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ.

Also Read  ನಮ್ಮ ಮೆಟ್ರೋ ಪ್ರಯಾಣಿಕರಿಗೆ ಪ್ರತಿ ಸೋಮವಾರ ಮುಂಜಾನೆ 4.15 ರಿಂದಲೇ ಮೆಟ್ರೋ ಸಂಚಾರ ಆರಂಭ..!

 

 

error: Content is protected !!
Scroll to Top