(ನ್ಯೂಸ್ ಕಡಬ) newskadaba.com ನ. 07. ಅಬಕಾರಿ ಇಲಾಖೆ ಮಂಗಳೂರು ದಕ್ಷಿಣ ವಲಯ-1 ರ ವ್ಯಾಪ್ತಿಯ ಗಣಪತಿ ಪದವಿಪೂರ್ವ ಕಾಲೇಜಿನಲ್ಲಿ ಮಾದಕ ದ್ರವ್ಯಗಳ ಸೇವನೆ ಹಾಗೂ ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಲಾಯಿತು .
ವಲಯದ ಅಬಕಾರಿ ಉಪನಿರೀಕ್ಷಕರಾದ ಹರೀಶ್ ಪಿ ಮತ್ತು ಅಬ್ದುಲ್ ರಜಾಕ್, ಮಾನ್ಯ ಜಂಟಿ ಆಯುಕ್ತರ ತಂಡದ ಅಬಕಾರಿ ನಿರೀಕ್ಷಕ ವಿಜಯಕುಮಾರ್ , ಜಿಲ್ಲಾ ತಂಡದ ಅಬಕಾರಿ ನಿರೀಕ್ಷಕ ಸುನಿಲ್ ಕುಮಾರ್ ಮತ್ತು ಅಬಕಾರಿ ಉಪ ನಿರೀಕ್ಷಕ ವಿಶ್ವನಾಥ್ ಹಾಗೂ ಅಬಕಾರಿ ಪೇದೆಗಳಾದ ಕುಮಾರ ನೀಲ ನಾಯಕ್ ಮತ್ತು ವೀರಪ್ಪ ಹಾಜರಿದ್ದರು .