ನ. 10ರಂದು ನಿವೀಸ್ ಮಂಗಳೂರು ಮ್ಯಾರಥಾನ್- 2024: ವಾಹನ ಸಂಚಾರ – ನಿಲುಗಡೆ ನಿಷೇಧ

(ನ್ಯೂಸ್ ಕಡಬ) newskadaba.com ಮಂಗಳೂರು, ನ. 07. ಮಂಗಳೂರು ರನ್ನರ್ಸ್ ಕ್ಲಬ್ ವತಿಯಿಂದ ಆಯೋಜಿಸಲಾಗುತ್ತಿರುವ “Niveus Mangaluru Marathon 2024” ಓಟ ಕಾರ್ಯಕ್ರಮದಲ್ಲಿ 5೦೦೦ ಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಲಿರುವುದಾಗಿ ತಿಳಿದುಬಂದಿದೆ.

ಮ್ಯಾರಥಾನ್‌ ಓಟ ಮಂಗಳಾ ಕ್ರೀಡಾಂಗಣದಿಂದ ಹೊರಟು ನಾರಾಯಣ ಗುರು ವೃತ್ತ (ಲೇಡಿಹಿಲ್), ಚಿಲಿಂಬಿ, ಉರ್ವ ಸ್ಟೋರ್ ಕೊಟ್ಟಾರ ಚೌಕಿ, ಕೋಡಿಕಲ್ ಕ್ರಾಸ್, ಕೂಳೂರು, ಕೆ.ಐ.ಒ.ಸಿ.ಎಲ್ ಜಂಕ್ಷನ್ ಮುಖಾಂತರ ಎನ್.ಎಂ.ಪಿ.ಎ ಸರ್ವಿಸ್ ರಸ್ತೆಯಲ್ಲಿ ಸಾಗಿ ಡಿಕ್ಸಿ ಕ್ರಾಸ್ ನಲ್ಲಿ ಪಣಂಬೂರು ಬೀಚ್ ರಸ್ತೆಗೆ ತಿರುಗಿ ವಾಪಾಸ್ಸು ಡಿಕ್ಸಿ ಕ್ರಾಸ್, ಕೆ.ಐ.ಓ.ಸಿ.ಎಲ್ ಜಂಕ್ಷನ್ ಗೆ ಬಂದು ತಣ್ಣೀರು ಬಾವಿ ಬೀಚ್ ವರೆಗೆ ಹೋಗಿ ವಾಪಾಸ್ಸು ಕೊಟ್ಟಾರಚೌಕಿ, ಲೇಡಿಹಿಲ್ ಮುಖಾಂತರ ಮಂಗಳಾ ಕ್ರೀಡಾಂಗಣದಲ್ಲಿ ಕೊನೆಗೊಳ್ಳಲಿದೆ. ಈ ಸಂಬಂಧ ನಗರದಲ್ಲಿ ವಾಹನ ಸಂಚಾರ – ನಿಲುಗಡೆ ನಿಷೇಧ, ನಿರ್ಬಂಧಿಸಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಕ್ರೀಡಾ ಪಟುಗಳು, ಕ್ರೀಡಾಭಿಮಾನಿಗಳು ಭಾಗವಹಿಸುವ ಈ ಮ್ಯಾರಥಾನ್ ಓಟಕ್ಕೆ ಸಾರ್ವಜನಿಕರೆಲ್ಲರೂ ಸಹಕರಿಸಬೇಕಾಗಿ ವಿನಂತಿ. ‎

Also Read  ಜಿಲ್ಲೆಯಲ್ಲಿ ಮೊದಲ ಮಳೆಗೆ ಮೊದಲ ಬಲಿ ► ಮಾಣಿ ಅಪಘಾತದ ಗಾಯಾಳು ಮೃತ್ಯು

 

 

error: Content is protected !!
Scroll to Top