ಮಂಗಳೂರು ತಾಲೂಕಿನಲ್ಲಿ ಮುಂಗಾರು ಬೆಳೆ ಸಮೀಕ್ಷೆ

(ನ್ಯೂಸ್ ಕಡಬ) newskadaba.com ನ. 06. 2024-25ನೇ ಸಾಲಿನ ಬೆಳೆ ಸಮೀಕ್ಷೆ ಕಾರ್ಯವು ಅಕ್ಟೋಬರ್-16 ರಿಂದ ಆರಂಭಗೊಂಡಿದ್ದು, ಮುಂಗಾರು ಹಂಗಾಮಿನಲ್ಲಿ ಮಂಗಳೂರು ತಾಲೂಕಿನಾದ್ಯಂತ ಕಡಿಮೆ ಪ್ರಗತಿ ಸಾಧನೆಯಾಗಿದೆ.

ಮಂಗಳೂರು ತಾಲೂಕು- ಬೆಳೆಸಮೀಕ್ಷೆ ಮಾಡಬೇಕಾಗಿರುವ ಸರ್ವೆ ನಂಬರ್‍ಗಳ ಸಂಖ್ಯೆ 40,537, ಪ್ರಗತಿ ಸಾಧಿಸಿರುವ ಸಂಖ್ಯೆ – 28,918, ಶೇಕಡಾ ಪ್ರಗತಿ – 72.50,

ಮುಲ್ಕಿ ತಾಲೂಕು- ಬೆಳೆಸಮೀಕ್ಷೆ ಮಾಡಬೇಕಾಗಿರುವ ಸರ್ವೆ ನಂಬರ್‍ಗಳ ಸಂಖ್ಯೆ 12,818, ಪ್ರಗತಿ ಸಾಧಿಸಿರುವ ಸಂಖ್ಯೆ-9,419, ಶೇಕಡಾ ಪ್ರಗತಿ-73.72,

ಮೂಡಬಿದ್ರೆ ತಾಲೂಕು- ಬೆಳೆಸಮೀಕ್ಷೆ ಮಾಡಬೇಕಾಗಿರುವ ಸರ್ವೆ ನಂಬರ್‍ಗಳ ಸಂಖ್ಯೆ – 34,511, ಪ್ರಗತಿ ಸಾಧಿಸಿರುವ ಸಂಖ್ಯೆ-33,408, ಶೇಕಡಾ ಪ್ರಗತಿ-  97.71,

ಉಳ್ಳಾಲ ತಾಲೂಕು- ಬೆಳೆಸಮೀಕ್ಷೆ ಮಾಡಬೇಕಾಗಿರುವ ಸರ್ವೆ ನಂಬರ್‍ಗಳ ಸಂಖ್ಯೆ – 26,248, ಪ್ರಗತಿ ಸಾಧಿಸಿರುವ ಸಂಖ್ಯೆ -13,409, ಶೇಕಡಾ ಪ್ರಗತಿ 51.99

ಬೆಳೆಸಮೀಕ್ಷೆ ಕಾರ್ಯವು ಈಗ ಖಾಸಗಿ ನಿವಾಸಿಗಳಿಗೆ ಮಾತ್ರ ತೆರೆದಿದ್ದು, ಅವರಿಂದ ಸಮೀಕ್ಷೆ ಮಾಡಿಸಬೇಕಾಗಿರುತ್ತದೆ. ಈ ಸಮೀಕ್ಷೆ ಕಾರ್ಯವು ಕೇವಲ ಇನ್ನು 3 ದಿವಸ ಮಾತ್ರ ಇರುವುದರಿಂದ ರೈತರು ಅಗತ್ಯವಾಗಿ ತಮ್ಮ ಗ್ರಾಮ ಪಂಚಾಯತಿಯ ಗ್ರಾಮ ಆಡಳಿತ ಅಧಿಕಾರಿಯವರಲ್ಲಿ ಅಥವಾ ಖಾಸಗಿ ನಿವಾಸಿಗಳನ್ನು ಸಂಪರ್ಕಿಸಿ ತಮ್ಮ ಜಾಗದ ಬೆಳೆ ಸಮೀಕ್ಷೆ ಪೂರ್ಣಗೊಳಿಸಬೇಕಾಗಿ ಕೋರಲಾಗಿದೆ. 2025-26ನೇ ಸಾಲಿನ ಹವಾಮಾನ ಆಧಾರಿತ ಅಡಿಕೆ ಮತ್ತು ಕಾಳು ಮೆಣಸುಬೆಳೆಗೆ ಬೆಳೆವಿಮೆ ನೊಂದಣಿ ಮಾಡಲು ರೈತರಿಗೆ ಬೆಳೆಸಮೀಕ್ಷೆ ಅಗತ್ಯವಿದೆ. ಜೊತೆಗೆ 2024-25ನೇ ಸಾಲಿನ ಬೆಳೆವಿಮೆ ಪರಿಹಾರ ಮೊತ್ತ ಪಾವತಿ ಪ್ರಕ್ರಿಯೆ ಕೂಡ ಈ ಸಾಲಿನ ಬೆಳೆಸಮೀಕ್ಷೆ ದತ್ತಾಂಶ ಆಧಾರದ ಮೇಲೆ ನಡೆಯುತ್ತದೆ.

Also Read  ಹೊಸಗದ್ದೆ ತೋಟಗಾರಿಕೆ ಕ್ಷೇತ್ರ ➤ ಅಡಿಕೆ ಫಸಲು ವಿಲೇವಾರಿ

ಪ್ರಕೃತಿ ವಿಕೋಪಗಳ ಪರಿಹಾರ ವಿತರಣೆ, ಬೆಂಬಲ ಬೆಲೆ ಯೋಜನೆಯ ಅರ್ಹ ಫಲಾನುಭವಿಗಳ ಗುರುತಿಸುವಿಕೆ, ಬೆಳೆ ವಿಮೆ ಯೋಜನೆ ಅನುಷ್ಠಾನ, ಋತುಮಾನವಾರು ವಿವಿಧ ಬೆಳೆಗಳ ವಿಸ್ತೀರ್ಣ ವರದಿ ಕಾರ್ಯ, ಬೆಳೆ ಕಟಾವು ಪ್ರಯೋಗ ಅನುಷ್ಠಾನ, ಕೃಷಿ/ತೋಟಗಾರಿಕೆ ಇಲಾಖೆಗಳ ಫಲಾನುಭವಿಯಾಧಾರಿತ ಯೋಜನೆಗಳ ಅನುಷ್ಠಾನ ಹಾಗೂ ಪಹಣಿಯಲ್ಲಿ ಬೆಳೆ ವಿವರ ದಾಖಲಿಸಲು ಬೆಳೆ ಸಮಿಕ್ಷೆ ಮಾಹಿತಿ ಬಳಸಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top