(ನ್ಯೂಸ್ ಕಡಬ) newskadaba.com ನ. 06. ಗುಜರಾತ್‌ನಲ್ಲಿ ನಡೆದ ರಾಷ್ಟ್ರೀಯ ಏಕತಾ ದಿವಸ್ ಕಾರ್ಯಕ್ರಮದಲ್ಲಿ ಸರ್ದಾರ್ ಪಟೇಲ್‌ಗೆ ಪ್ರಧಾನಿ ಮೋದಿ ಗೌರವಾರ್ಪಣೆ ಮಾಡುವ ಪರೇಡ್‌ನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಡಬ ತಾಲೂಕಿನ ಕೊಯಿಲ ಗ್ರಾಮದ ಆನೆಗುಂಡಿಯ ಅನುಜ್ಞಾ ವೈ.ಟಿ ಭಾಗಿಯಾದರು.
ಭಾರತದ ಮೊದಲ ಗೃಹ ಸಚಿವ ದಿ. ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನದಂದು ರಾಷ್ಟ್ರೀಯ ಏಕತಾ ದಿವಸ್ ಆಚರಿಸಲಾಯಿತು. ಈ ಸಂದರ್ಭ ನಡೆದ ಪರೇಡ್ ನಲ್ಲಿ ಎನ್.ಎಸ್.ಜಿ, ಬಿಎಸ್.ಎಫ್, ಎನ್.ಸಿಸಿ ಮತ್ತು ವಿವಿಧ ರಾಜ್ಯಗಳ 16 ಪೊಲೀಸ್ ಕವಾಯತು ತಂಡ, ಮಹಿಳಾ ಸಿಆರ್.ಪಿಎಫ್ ಬೈಕರ್ ಗಳಿಂದ ಡೇರ್ ಡೆವಿಲ್ ಶೋ, ಬಿಎಸ್.ಎಫ್.ನ ಮಹಿಳಾ ಪೈಪ್ ಬ್ಯಾಂಡ್, ಗುಜರಾತ್ ಮಹಿಳಾ ಪೊಲೀಸರಿಂದ ನೃತ್ಯ ಸಂಯೋಜನೆ, ಶಾಲಾ ಬ್ಯಾಂಡ್ ಗಳ ಪ್ರದರ್ಶನ, ಭಾರತೀಯ ವಾಯುಪಡೆಯಿಂದ ವಿಶೇಷ ಹಾರಾಟ, ವಿಶೇಷವಾಗಿ ಎನ್‌ಸಿಸಿಸಾಂಸ್ಕೃತಿಕ ಪ್ರದರ್ಶನ ನಡೆಯಿತು.
ಎನ್‌ಸಿಸಿ ಸಾಂಸ್ಕೃತಿಕ ಪ್ರದರ್ಶನದಲ್ಲಿ ಉಜಿರೆ ಮಂಜುನಾಥೇಶ್ವರ ಕಾಲೇಜಿನಲ್ಲಿ ಮೂರನೇ ವರ್ಷದ ಬಿಎ ಪದವಿ ಓದುತ್ತಿರುವ ಎನ್.ಸಿಸಿಯ ಅನುಜ್ಞಾ ಭಾಗವಹಿಸಿದ್ದಾರೆ. ಕರ್ನಾಟಕ ಗೋವಾ ಡೈರೆಕ್ಟರೇಟ್ ನ್ನು ಮುನ್ನಡೆಸಿ ಡಿ.ಜಿ. ಅಪ್ರೆಸಿಯೇಶನ್ ಪಡೆದ ಕೆಡೆಟ್ ಅನುಜ್ಞಾ ಪುತ್ತೂರು ವಿವೇಕಾನಂದ ವಿದ್ಯಾಸಂಸ್ಥೆ ಹಾಗೂ ಆಲಂಕಾರು ಭಾರತಿ ಶಾಲೆಯ ಹಳೆ ವಿದ್ಯಾರ್ಥಿನಿ. ಕೊಯಿಲ ಗ್ರಾಮದ ಆನೆಗುಂಡಿ ಯದುಶ್ರೀ ಮತ್ತು ಮಮತಾ ದಂಪತಿ ಪುತ್ರಿ.