ಬಸ್ಸುಗಳಿಲ್ಲದೆ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ: ಸಾರ್ವಜನಿಕರ ಆಕ್ರೋಶ

(ನ್ಯೂಸ್ ಕಡಬ) newskadaba.com ಸುಳ್ಯ, . 06. ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದಲ್ಲಿ ಸುಮಾರು ಒಂದು ಗಂಟೆಯ ತನಕ ಬಸ್ಸುಗಳಿಲ್ಲದೆ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಸ್ಸಿಗಾಗಿ ಕಾದು ಸಾರ್ವಜನಿಕರು ಆಕ್ರೋಶಗೊಂಡಿದ್ದರು.

ಪುತ್ತೂರು ಮಂಗಳೂರು ಮತ್ತು ಮೈಸೂರು ಕಡೆ ಹೋಗುವ ಬಸ್ಸುಗಳು ಅದೇ ರೀತಿ ಗ್ರಾಮೀಣ ಭಾಗಗಳಿಗೆ ಹೋಗುವಂತಹ ಬಸ್ಸುಗಳು ಕೂಡ ಇಲ್ಲದೆ ಪ್ರಯಾಣಿಕರು ಬಸ್ಸು ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುವ ದೃಶ್ಯಗಳು ಕಂಡುಬಂದಿದ್ದು ಪ್ರಯಾಣಿಕರ ಪಾಡು ಹೇಳತೀರದ್ದಾಗಿದೆ. ದೀಪಾವಳಿ ಹಬ್ಬ ಕಳೆದ ಬಳಿಕ ತಮ್ಮ ತಮ್ಮ ಊರುಗಳಿಗೆ ಮತ್ತು ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಈ ದೃಶ್ಯವು ಕಳೆದ ಎರಡು ದಿನಗಳಿಂದಲೇ ಕಂಡುಬರುತ್ತಿದ್ದು ಸಂಬಂಧಪಟ್ಟ ಇಲಾಖೆಯವರು ಸ್ಪಂದಿಸಬೇಕಾಗಿದೆ ಎಂಬುವುದು ಸಾರ್ವಜನಿಕರ ಆಗ್ರಹವಾಗಿದೆ.

Also Read  ಜನವರಿ 31ರಂದು ಚಂದ್ರ ಗ್ರಹಣದ ಹಿನ್ನೆಲೆ ► ಕುಕ್ಕೇ ಸುಬ್ರಹ್ಮಣ್ಯದಲ್ಲಿ ದರ್ಶನ ಸಮಯದಲ್ಲಿ ಬದಲಾವಣೆ

 

error: Content is protected !!
Scroll to Top