ಸಲ್ಮಾನ್‌ ಖಾನ್‌ ಗೆ ಮತ್ತೊಂದು ಬೆದರಿಕೆ: 5 ಕೋಟಿ ರೂ.ಗೆ ಬೇಡಿಕೆ

(ನ್ಯೂಸ್ ಕಡಬ) newskadaba.com ಮುಂಬೈ, ನ. 05.  ಬಾಲಿವುಡ್‌ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ಗೆ ಪದೇಪದೆ ಜೀವ ಬೆದರಿಕೆ ಕರೆಗಳು ಬರುತ್ತಿವೆ. ಮಾಜಿ ಸಚಿವ ಬಾಬಾ ಸಿದ್ಧಿಕಿ ಹತ್ಯೆಯ ನಂತರ ಸಲ್ಮಾನ್‌ಗೆ ಕೊಲೆ ಬೆದರಿಕೆಗಳು ಜೋರಾಗಿವೆ. ಈಗ ಮತ್ತೊಂದು ಬೆದರಿಕೆ ಸಂದೇಶ ಬಂದಿದ್ದು, ಪೊಲೀಸರು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.

ಲಾರೆನ್ಸ್‌ ಬಿಷ್ಣೋಯ್‌ ಸಹೋದರ ಎಂದು ಹೇಳಿಕೊಳ್ಳುವ ವ್ಯಕ್ತಿ ಐದು ಕೋಟಿ ಬೇಡಿಕೆ ಹಾಗೂ ದೇವಸ್ಥಾನಕ್ಕೆ ಬಂದು ಸಲ್ಮಾನ್‌ ಕ್ಷಮೆ ಕೇಳಬೇಕೆಂದು ಮುಂಬೈನ ಸಂಚಾರ ನಿಯಂತ್ರಣ ಕೊಠಡಿಗೆ ಸಂದೇಶ ಕಳುಹಿಸಿದ್ದಾನೆ. ಮುಂಬೈನ ಸಂಚಾರ ನಿಯಂತ್ರಕ ಕೊಠಡಿಗೆ ಸಂದೇಶ ಕಳುಹಿಸಿರುವ ವ್ಯಕ್ತಿ ತಾನು ಲಾರೆನ್ಸ್‌ ಬಿಷ್ಣೋಯ್‌ ಸಹೋದರ ಎಂದು ಹೇಳಿದ್ದಾನೆ. ಸಲ್ಮಾನ್‌ ಜೀವಂತವಾಗಿರಬೇಕೆಂದರೆ ಆತ ನಮಗೆ ಐದು ಕೋಟಿ ನೀಡಬೇಕು ಹಾಗೂ ದೇವಸ್ಥಾನಕ್ಕೆ ಬಂದು ನಮ್ಮ ಸಮಾಜದವರೊಂದಿಗೆ ಕ್ಷಮೆ ಕೇಳಬೇಕು. ಅವನು ಹಾಗೆ ಮಾಡದೆ ಇದ್ದಲ್ಲಿ ಅವನನ್ನು ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾನೆ.

Also Read  ಕ್ವಾರೆಂಟೈನ್ ನಲ್ಲಿದ್ದ ಯೋಧ ಹೃದಯಾಘಾತದಿಂದ ಸಾವು

 

error: Content is protected !!
Scroll to Top