ಪ್ಲಾಸ್ಟಿಕ್ ಗೋದಾಮು ಮೇಲೆ ಬಿಬಿಎಂಪಿ ದಾಳಿ: 1.40 ಲಕ್ಷ ರೂ.ದಂಡ

(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 05. ನಗರದ ದಕ್ಷಿಣ ವಲಯ ವ್ಯಾಪ್ತಿಯಲ್ಲಿನ 1 ಗೋದಾಮು ಹಾಗೂ 12 ಮಳಿಗೆಗಳ ಮೇಲೆ ದಾಳಿ ಬಿಬಿಎಂಪಿ ಸೋಮವಾರ ದಾಳಿ ನಡೆಸಿದ್ದು, 2,200 ಕೆ.ಜಿ ಏಕ ಬಳಕೆಯ ಪ್ಲಾಸ್ಟಿಕ್ ವಶಪಡಿಸಿಕೊಂಡು 1.40 ಲಕ್ಷ ರೂ. ದಂಡ ವಿಧಿಸಿದೆ.

ಪ್ಲಾಸ್ಟಿಕ್ ಬಳಕೆ ಮಾಡುವ ಗೋದಾಮು ಹಾಗೂ ಮಳಿಗೆಗಳ ಮೇಲೆ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತದ (ಬಿಎಸ್‌ಡಬ್ಲ್ಯುಎಂಎಲ್) ಮುಖ್ಯ ಪ್ರಧಾನ ವ್ಯವಸ್ಥಾಪಕ ಬಸವರಾಜ ಕಬಾಡೆ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದರು.

Also Read  ಸುಳ್ಯ: ತೋಟಕ್ಕೆ ಲಗ್ಗೆಯಿಟ್ಟ ಕಾಡಾನೆ ➤ ಅಪಾರ ಪ್ರಮಾಣದ ಕೃಷಿ‌ಹಾನಿ

 

error: Content is protected !!
Scroll to Top