ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನ; ಅರ್ಜಿ ಸಲ್ಲಿಕೆಗೆ ಅವಧಿ ವಿಸ್ತರಣೆ

(ನ್ಯೂಸ್ ಕಡಬ) newskadaba.com ನ. 05. 2024-25ನೇ ಸಾಲಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ ವತಿಯಿಂದ  ಅಲ್ಪಸಂಖ್ಯಾತರ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖ್ ಮತ್ತು ಪಾರ್ಸಿ ವಿದ್ಯಾರ್ಥಿಗಳಿಗೆ ವಿವಿಧ ವಿದ್ಯಾರ್ಥಿವೇತನಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ನವೆಂಬರ್ 30ರ ವರೆಗೆ ಅವಧಿ ವಿಸ್ತರಿಸಲಾಗಿದೆ.

ಯೋಜನೆಗಳು- ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶ (SSP)ಯಲ್ಲಿ 1ನೇ ತರಗತಿಯಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಆನ್‍ ಲೈನ್  ಮೂಲಕ  ಅರ್ಜಿ ಸಲ್ಲಿಸಲು, ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್ ಓದುತ್ತಿರುವ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ವಿದೇಶಿ ವಿದ್ಯಾರ್ಥಿ ವೇತನಕ್ಕಾಗಿ (ನ್ಯಾಷನಲ್ ಓವರ್‍ಸೀಸ್ ಸ್ಕಾಲರ್‍ ಶಿಪ್) ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು, ರಾಷ್ಟೀಯ  ಉನ್ನತ  ಶಿಕ್ಷಣ  ಸಂಸ್ಥೆಗಳಲ್ಲಿ  ಪ್ರವೇಶ  ಪಡೆದ (IIT, IIM, IIIT, NIT, IISER, AIIMS, NLU, INI & amp; IuSLA) ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ಕೋರ್ಸ್ ಅವಧಿಯಲ್ಲಿ ಒಂದು ಬಾರಿಗೆ ರೂ. 2 ಲಕ್ಷಗಳ ಪ್ರೋತ್ಸಾಹಧನಕ್ಕೆ ಅರ್ಜಿ ಸಲ್ಲಿಸಲು, ಎಂ.ಫಿಲ್ ಮತ್ತು ಪಿಎಚ್ ಡಿ ಗೆ ಪೂರ್ಣಕಾಲಿಕ ನೋಂದಣಿಯಾಗಿ ವ್ಯಾಸಂಗ ಮಾಡುತ್ತಿರುವ ಅರ್ಹ ಅಲ್ಪಸಂಖ್ಯಾತರ ವಿದ್ಯಾರ್ಥಿಗಳು ಫೆಲೋಶಿಪ್‍ ಗೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಿಸಲಾಗಿದೆ.

Also Read  ಮಂಗಳೂರು ವಿವಿ : ಕೋವಿಡ್ ನಿಂದ ಪರೀಕ್ಷೆ ತಪ್ಪಿಸಿಕೊಂಡವರಿಗೆ ಮತ್ತೊಮ್ಮೆ ಅವಕಾಶ

ವಿವಿಧ  ವಿದ್ಯಾರ್ಥಿ ವೇತನದ ಹಾಗೂ ಪ್ರೋತ್ಸಾಹ ಧನದ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲಾಖೆಯ ವೆಬ್‍ಸೈಟ್ ವಿಳಾಸ https://dom.karnataka.gov.in/dakshina_kannada/public ಅಥವಾ ಸಹಾಯವಾಣಿ: 8277799990  ಅಥವಾ ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರವನ್ನು ಸಂಪರ್ಕಿಸುವಂತೆ ಅಲ್ಪಸಂಖ್ಯಾತರ ಕಲ್ಯಾಣ  ಇಲಾಖೆ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top