ವಾಣಿಜ್ಯ ಸಿಲಿಂಡರ್ ದರ ಏರಿಕೆ..!

(ನ್ಯೂಸ್ ಕಡಬ) newskadaba.com ನ. 01.  ದೀಪಾವಳಿ ಹಬ್ಬದ ಸಂದರ್ಭದಲ್ಲೇ ವಾಣಿಜ್ಯ ಬಳಕೆಯ 19 ಕೆ.ಜಿ. ತೂಕದ ಸಿಲಿಂಡರ್‌ ದರವನ್ನು 62 ರೂಪಾಯಿಗೆ ಏರಿಕೆ ಮಾಡಲಾಗಿದ್ದು, ದೆಹಲಿಯಲ್ಲಿ ಸಿಲಿಂಡರ್‌ ದರ 1,802 ರೂಪಾಯಿ ಎಂದು ವರದಿಯಾಗಿದೆ.

 

5 ಕೆ.ಜಿ. ಫ್ರೀ ಟ್ರೇಡ್‌ ಎಲ್‌ ಪಿಜಿ ಸಿಲಿಂಡರ್‌ಗಳ ಬೆಲೆಯೂ ಏರಿಕೆ ಕಂಡಿದ್ದು, 15 ರೂಪಾಯಿ ಹೆಚ್ಚಿಸಲಾಗಿದೆ. 14.2 ಕೆ.ಜಿ. ಸಿಲಿಂಡರ್‌ ದರದಲ್ಲಿ ಯಾವುದೇ ಬದಲಾವಣೆಗಳಿಲ್ಲದೆ ಯತಾಸ್ಥಿತಿಯಲ್ಲಿದೆ. ಸದ್ಯ ವಾಣಿಜ್ಯ ಬಳಕೆಯ ಸಿಲಿಂಡರ್‌ ದರಗಳನ್ನು ಮಾತ್ರವೇ ಹೆಚ್ಚಿಸಲಾಗಿದ್ದು, ಗಹ ಬಳಕೆ ಸಿಲಿಂಡರ್‌ಗಳ ದರ ಏರಿಕೆಯಾಗಿಲ್ಲ. ವಾಣಿಜ್ಯ ಬಳಕೆ ಸಿಲಿಂಡರ್‌ಗಳ ಪರಿಷ್ಕೃತ ದರವು ದೆಹಲಿ, ಮುಂಬೈ, ಕಲ್ಕತ್ತಾ, ಚೆನ್ನೈ ನಗರಗಳಲ್ಲಿ ಇಂದಿನಿಂದಲೇ ಜಾರಿ ಇರಲಿದೆ. ಕಳೆದ ಮೂರು ತಿಂಗಳಿನಿಂದ ವಾಣಿಜ್ಯ ಬಳಕೆ ಸಿಲಿಂಡರ್‌ ದರವು ಏರಿಕೆ ಕಾಣುತ್ತಲೇ ಇದೆ.

Also Read  ತಡವಾಗಿ ಬಂದ ಆಂಬ್ಯುಲೆನ್ಸ್   ➤ ಹೊಟ್ಟೆ ನೋವಿನಿಂದ 23 ವರ್ಷದ ಗರ್ಭಿಣಿ ಮೃತ್ಯು.!!  

 

error: Content is protected !!
Scroll to Top