ಅಕ್ರಮ ಬಾಂಗ್ಲಾ ವಲಸಿಗರ ನ್ಯಾಯಾಂಗ ಬಂಧನ- 14 ದಿನ ಅವಧಿ ವಿಸ್ತರಣೆ

(ನ್ಯೂಸ್ ಕಡಬ)newskadaba.com ಉಡುಪಿ, . 31. ಜಿಲ್ಲೆಯಲ್ಲಿ ಅಕ್ರಮವಾಗಿ ನೆಲೆಸಿರುವ ಪ್ರಕರಣದ 10 ಮಂದಿ ಬಾಂಗ್ಲಾ ವಲಸಿಗರ ನ್ಯಾಯಾಂಗ ಬಂಧನ ಅವಧಿಯನ್ನು ಮತ್ತೆ 14 ದಿನಗಳ ಕಾಲ ವಿಸ್ತರಿಸಿ ಉಡುಪಿ ನ್ಯಾಯಾಲಯ ಬುಧವಾರ ಆದೇಶಿಸಿದೆ.

ಉಡುಪಿಯ ಹೂಡೆ, ಸಂತೆಕಟ್ಟೆ, ಕಾರ್ಕಳದ ಮಾಳದಲ್ಲಿ 10 ಮಂದಿ ಆರೋಪಿಗಳನ್ನು ಬಂಧಿಸಿ, ಅವರನ್ನೆಲ್ಲಾ ಹಿರಿಯಡ್ಕದಲ್ಲಿರುವ ಜಿಲ್ಲಾ ಕಾರಾಗೃಹದಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ಉಡುಪಿಯ ಪ್ರಧಾನ ಎರಡನೇ ಸಿವಿಲ್ ನ್ಯಾಯಾಧೀಶರು ಮತ್ತು ಸಿಜೆಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಇದೀಗ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಯೋಗೀಶ್ ಅವರು ಎಲ್ಲ 10 ಮಂದಿ ಆರೋಪಿಗಳಿಗೆ ನ.15ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದರು.

Also Read  ತಂಗಿಯ ರುಂಡ ಹಿಡಿದು ಬೀದಿ ಸುತ್ತಿದ ಸಹೋದರ - ವಿಡಿಯೋ ವೈರಲ್..!

 

 

error: Content is protected !!
Scroll to Top