11 ವರ್ಷದ ಬಳಿಕ ತವರಿನಲ್ಲಿ ಟೆಸ್ಟ್‌ ಆಡಲು ರೋಹಿತ್‌ ಸಜ್ಜು

(ನ್ಯೂಸ್ ಕಡಬ)newskadaba.com ಮುಂಬೈ, . 31. ನ್ಯೂಜಿಲ್ಯಾಂಡ್‌ ವಿರುದ್ಧ ನಾಳೆಯಿಂದ ವಾಂಖೆಡೆ ಸ್ಟೇಡಿಯಂನಲ್ಲಿ ಆರಂಭವಾಗಲಿರುವ ಮೂರನೇ ಟೆಸ್ಟ್‌ ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮ ಅವರಿಗೆ ವಿಶೇಷ ಪಂದ್ಯವಾಗಿದೆ. 11 ವರ್ಷಗಳ ಬಳಿಕ ರೋಹಿತ್‌ ತವರಿನಲ್ಲಿ ಆಡುತ್ತಿರುವ ಮೊದಲ ಟೆಸ್ಟ್‌ ಪಂದ್ಯ ಇದಾಗಿದೆ.

ಮುಂಬಯಿಯ ವಾಂಖೆಡೆ ಸ್ಟೇಡಿಯಂನಲ್ಲಿ ರೋಹಿತ್‌ ಕೊನೆಯ ಬಾರಿಗೆ ಟೆಸ್ಟ್‌ ಪಂದ್ಯವನ್ನಾಡಿದ್ದು 2013 ರಲ್ಲಿ. ಅದು ಕ್ರಿಕೆಟ್‌ ದೇವರು ಎಂದು ಕರೆಯುವ ಸಚಿನ್‌ ತೆಂಡೂಲ್ಕರ್‌ ಅವರ ವಿದಾಯ ಪಂದ್ಯವಾಗಿತ್ತು. ವಿಂಡೀಸ್‌ ವಿರುದ್ಧದ ಈ ಪಂದ್ಯದಲ್ಲಿ ರೋಹಿತ್‌ ಶತಕ ಬಾರಿಸಿ ಮಿಂಚಿದ್ದರು. 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ರೋಹಿತ್‌ 127 ಎಸೆತಗಳಿಂದ 11 ಬೌಂಡರಿ ಮತ್ತು 3 ಸಿಕ್ಸರ್‌ ನೆರವಿನಿಂದ ಅಜೇಯ 111 ರನ್‌ ಬಾರಿಸಿದ್ದರು.

Also Read  ಮಂಗಳೂರು: ಕೊಟ್ಟಾರಿ ಪ್ರೀಮಿಯರ್ ಲೀಗ್ 2024- ಚಾಂಪಿಯನ್ ಪಟ್ಟಕ್ಕೇರಿದ ಕೊಟ್ಟಾರಿ ಮೈಟಿ ಬುಲ್ಸ್ ತಂಡ

 

 

error: Content is protected !!
Scroll to Top