ರಬ್ಬರ್ ಮಂಡಳಿಯಲ್ಲಿ ವಿವಿಧ ಹುದ್ದೆಗಳು- ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಅ. 31. ರಬ್ಬರ್ ಮಂಡಳಿ ರಬ್ಬರ್ ಉತ್ಪಾದನಾ ಇಲಾಖೆಯ ವಿಸ್ತರಣಾ ಸೇವೆಗಳಲ್ಲಿ ತಾಂತ್ರಿಕ ಮಾನವ ಸಂಪನ್ಮೂಲವನ್ನು ಯುವ ವೃತ್ತಿಪರರಾಗಿ ತೊಡಗಿಸಿಕೊಳ್ಳಲು ಯುವ ವೃತ್ತಿಪರರಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‍ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ರಬ್ಬರ್ ಉತ್ಪಾದನಾ ಇಲಾಖೆಯಲ್ಲಿನ ವಿಸ್ತರಣಾ ಸೇವೆಗಳು, ಸಾಂಪ್ರದಾಯಿಕವಲ್ಲದ ಪ್ರದೇಶದಲ್ಲಿ (ಕೇರಳ ಮತ್ತು ತಮಿಳುನಾಡು ಹೊರತುಪಡಿಸಿ) ಮತ್ತು ಈಶಾನ್ಯ ರಾಜ್ಯಗಳ ಪ್ರದೇಶದಲ್ಲಿರುತ್ತದೆ. ನೇಮಕಾತಿಯ ಸ್ವರೂಪ ತಾತ್ಕಾಲಿಕವಾಗಿದ್ದು, ತಿಂಗಳಿಗೆ ರೂ 40,000 ಗಳ ವೇತನವಾಗಿರುತ್ತದೆ. ಈಶಾನ್ಯ ರಾಜ್ಯಗಳ ಪ್ರದೇಶದಲ್ಲಿ ಲಭ್ಯವಿರುವ ಹುದ್ದೆಗಳ ಸಂಖ್ಯೆ 40 ಮತ್ತು ಸಾಂಪ್ರದಾಯಿಕವಲ್ಲದ ಪ್ರದೇಶದಲ್ಲಿ 10 ಹುದ್ದೆಗಳು ಲಭ್ಯವಿದೆ.

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕೃಷಿ/ತೋಟಗಾರಿಕೆ/ಅರಣ್ಯಶಾಸ್ತ್ರದಲ್ಲಿ ಬಿಎಸ್ಸಿ ಪದವಿ ಅಥವಾ ಸಸ್ಯಶಾಸ್ತ್ರ/ಸಸ್ಯವಿಜ್ಞಾನದಲ್ಲಿ MSc ಪದವಿಯನ್ನು ಹೊಂದಿರಬೇಕು. ಈಶಾನ್ಯ ಪ್ರದೇಶದ ಅಭ್ಯರ್ಥಿಗಳು ಮಾತ್ರ ಈಶಾನ್ಯ ರಾಜ್ಯಗಳ ಪ್ರದೇಶದಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

Also Read  ಮಂಗಳೂರು: ಗಾಂಜಾ ಮಾರಾಟಕ್ಕೆ ಯತ್ನ ➤ ನಾಲ್ವರು ಆರೋಪಿಗಳ ಬಂಧನ

ಕರ್ನಾಟಕ, ಆಂಧ್ರಪ್ರದೇಶ, ಒಡಿಶಾ ಮತ್ತು ಪಶ್ಚಿಮಬಂಗಾಳ ರಾಜ್ಯಗಳ ಅಭ್ಯರ್ಥಿಗಳಿಗೆ ಸಾಂಪ್ರದಾಯಿಕವಲ್ಲದ ಪ್ರದೇಶದ ಹುದ್ದೆಗಳಿಗೆ ಆದ್ಯತೆ ನೀಡಲಾಗುವುದು. ಸ್ಥಳೀಯ ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಅರ್ಜಿದಾರರ ಗರಿಷ್ಠ ವಯಸ್ಸಿನ ಮಿತಿ 2024 ಅಕ್ಟೋಬರ್ ಗೆ 30 ವರ್ಷ ಆಗಿರಬೇಕು.

ಈ ಹುದ್ದೆಯ ಅವಧಿಯು 2026 ಮಾರ್ಚ್ 31ರ ವರೆಗೆ ಇರುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಸಾಂಪ್ರದಾಯಿಕವಲ್ಲದ ಪ್ರದೇಶ (NT – Non-Traditional Region) (NE- North Eastern Region) ಉತ್ಪಾದನಾ ಇಲಾಖೆಯ ವಿಸ್ತರಣೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ಸಂಬಂಧಿಸಿದ ಕರ್ತವ್ಯಗಳನ್ನು ನಿಯೋಜಿಸಲಾಗುತ್ತದೆ.

ಆಸಕ್ತ ಅಭ್ಯರ್ಥಿಗಳು ರಬ್ಬರ್ ಬೋರ್ಡ್ ವೆಬ್‍ ಸೈಟ್ www.rubberboard.org.in ನಲ್ಲಿ ಆನ್ ಲೈನ್ ನೇಮಕಾತಿ ಅರ್ಜಿ (Online Recruitment Application – ORA) ಲಿಂಕ್ ಅನ್ನು ಬಳಸಿಕೊಂಡು ಆನ್‍ ಲೈನ್‍ ನಲ್ಲಿ ಅರ್ಜಿ ನಲ್ಲಿಸಬೇಕು. ಅರ್ಜಿ ಸಲ್ಲಿಸಲು ನವೆಂಬರ್ 13 ಕೊನೆಯ ದಿನ. ಅರ್ಹ ಅಭ್ಯರ್ಥಿಗಳಿಗೆ ಮಂಗಳೂರಿನಲ್ಲಿ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ನಡೆಯಲಿದೆ ಎಂದು ಕೊಟ್ಟಾಯಂ ರಬ್ಬರ್ ಮಂಡಳಿ ಉತ್ಪಾದನಾ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top