ದೈವನರ್ತಕ-ಪಾತ್ರಿ ಲೋಕಯ್ಯಸೇರಾ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ಗೆ ಆಯ್ಕೆ

(ನ್ಯೂಸ್ ಕಡಬ)newskadaba.com ಬಂಟ್ವಾಳ, . 31.  ಕರ್ನಾಟಕ‌ ಸರ್ಕಾರ ಕೊಡಮಾಡುವ ಜಾನಪದ ಕ್ಷೇತ್ರದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ದೈವನರ್ತಕ-ಪಾತ್ರಿ ಲೋಕಯ್ಯಸೇರಾ ಆಯ್ಕೆಯಾಗಿದ್ದಾರೆ.

ಕಳೆದ 57 ವರ್ಷಗಳಿಂದ ಜಾನಪದ ಕಲಾವಿದನಾಗಿ, ದೈವಾರಾಧನೆಯ ಕ್ಷೇತ್ರದಲ್ಲಿ ಭೂತಕಟ್ಟುವ ನರ್ತಕ-ಪಾತ್ರಿಯಾಗಿ ಗಣನೀಯ ಸೇವೆ ಸಲ್ಲಿಸಿರುತ್ತಾರೆ. ತುಳುನಾಡಿನ ಕಾರಣಿಕ ದೈವಗಳಾದ ಕಲ್ಲುರ್ಟಿ, ಕಲ್ಕುಡ, ಪಂಜುರ್ಲಿ, ಚಾಮುಂಡಿ, ಧೂಮಾವತಿ, ರಕೇಶ್ವರಿ ಇತ್ಯಾದಿಗಳಿಗೆ ನೇಮಗಳನ್ನು ಆಚಾರದಲ್ಲಿ ಕಟ್ಟಿರುತ್ತಾರೆ. ಬಂಟ್ವಾಳ ತಾಲೂಕಿನಲ್ಲಿ ನಲಿಕೆಯವರ ಸಮಾಜ ಸೇವಾ ಸಂಘದ ಸ್ಥಾಪಕ ಅಧ್ಯಕ್ಷರಾಗಿ, ಪ್ರಸ್ತುತ ಗೌರವ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು, ಸಾರ್ವಜನಿಕ ಕ್ಷೇತ್ರದ ಹಲವಾರು ಸಂಘಟನೆಗಳಲ್ಲಿ ಜವಾಬ್ದಾರಿ ನಿರ್ವಹಿಸುತ್ತಿರುವ ಇವರಿಗೆ2012 ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಮಾತ್ರವಲ್ಲದೆ, ಗಣರಾಜ್ಯೋತ್ಸವ ಪ್ರಶಸ್ತಿ, ಆದರ್ಶ ಶೃಂಗ ಪ್ರಶಸ್ತಿ, ಸೌರಭ ಪ್ರಶಸ್ತಿ, ಜಾನಪದ ಅಕಾಡೆಮಿ ಪ್ರಶಸ್ತಿ ಸಹಿತ ಹಲವು ಗೌರವ ಸನ್ಮಾನಗಳು ದೊರೆತಿವೆ.

Also Read  ಉಡುಪಿ : ನೇಕಾರರ ಕುಟುಂಬದ ನೆರವಿಗೆ ನಿಂತ ನಟಿ ಪ್ರಣೀತಾ

 

 

error: Content is protected !!
Scroll to Top