ಬುಲೆಟ್ ಬೈಕ್‌- ಡಿವೈಡರ್‌ ಡಿಕ್ಕಿ: ಬೈಕ್ ಸವಾರ ಮೃತ್ಯು..!

(ನ್ಯೂಸ್ ಕಡಬ)newskadaba.com ಚಿಕ್ಕಬಳ್ಳಾಪುರ, . 30. ಬುಲೆಟ್ ಬೈಕ್ ಡಿವೈಡರ್‌ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.

ದೇವನಹಳ್ಳಿ ಬಳಿಯ ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ ಏರ್‌ಪೋರ್ಟ್‌ ರಸ್ತೆಯಲ್ಲಿ ಘಟನೆ ನಡೆದಿದ್ದು, ಮೃತಪಟ್ಟ ಯುವಕನನ್ನು ಚಿಕ್ಕಬಳ್ಳಾಪುರ ನಗರದ ರಾಹುಲ್ (18)ಎಂದು ಗುರುತಿಸಲಾಗಿದೆ. ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ಆಗಮಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಪಕ್ಕದಲ್ಲೇ ಬರುತ್ತಿದ್ದ ವಾಹನವೊಂದಕ್ಕೆ ಬುಲೆಟ್ ಬೈಕ್‌ ಟಚ್ ಆಗಿ ಡಿವೈಡರ್‌ಗೆ ಡಿಕ್ಕಿ ಹೊಡೆದಿರುವ ಶಂಕೆ ವ್ಯಕ್ತವಾಗಿದೆ. ಕೇಂಪೇಗೌಡ ಏರ್‌ಪೋರ್ಟ್‌ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಬಂಟ್ವಾಳ: ಕೆಲಸದ ವೇಳೆ ಕೊರೋನಾ ಹರಡಿರುವ ಭೀತಿ ➤ ಪೆಟ್ರೋಲ್ ಬಂಕ್ ಉದ್ಯೋಗಿ ಆತ್ಮಹತ್ಯೆ

 

error: Content is protected !!
Scroll to Top