ಬೈಕುಗಳಿಗೆ 50 ರೂ., ಕಾರುಗಳಿಗೆ 200 ರೂ., ಇದು ಯಾವುದೋ ಟೋಲ್ ದುಡ್ಡಲ್ಲ ► ಪೆರಿಯಶಾಂತಿಯಲ್ಲಿ ಮರ ತೆರವಿನ ನೆಪದಲ್ಲಿ ಹಗಲು ದರೋಡೆಯ ವೀಡಿಯೋ ವೈರಲ್

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಮಾ.21. ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಪೆರಿಯಶಾಂತಿ ಎಂಬಲ್ಲಿ ರಸ್ತೆಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ಯುವಕರ ತಂಡವೊಂದು ಹಣ ಸಂಗ್ರಹಿಸಿದ ಘಟನೆಯ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಪೆರಿಯಶಾಂತಿ ಎಂಬಲ್ಲಿ ಸೋಮವಾರ ಸಂಜೆ ಸುರಿದ ಭಾರೀ ಗಾಳಿ ಮಳೆಯಿಂದಾಗಿ ಬೃಹತ್ ಮರವೊಂದು ರಸ್ತೆಗೆ ಅಡ್ಡವಾಗಿ ಮುರಿದು ಬಿದ್ದಿದ್ದು, ಈ ಮರವನ್ನು ತೆರವುಗೊಳಿಸಿದ ಕೆಲವು ಮುಸ್ಲಿಂ ಯುವಕರು, ಅದೇ ರಸ್ತೆಯಲ್ಲಿ ಬರುತ್ತಿದ್ದ ಅನೇಕ ವಾಹನ ಚಾಲಕರಿಂದ ಹೆಚ್ಚುವರಿ ಹಣ ಸಂಗ್ರಹಣೆ ಮಾಡಿದ್ದಾರೆ. ತಲಾ ಬೈಕ್ 50 ರೂ, ಕಾರು ಹಾಗೂ ಇನ್ನಿತರ ವಾಹನಗಳ ಚಾಲಕರಿಂದ 200 ರೂ., ನಂತೆ ಹಲವು ವಾಹನಗಳನ್ನು ಅಡ್ಡಗಟ್ಟಿ ಹಣ ಸಂಗ್ರಹಿಸುವುದರ ಮೂಲಕ ಹಗಲು ದರೋಡೆ ಮಾಡಿದ್ದಾರೆ ಎನ್ನಲಾದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮರ ತೆರವುಗೊಳಿಸಿ ಸಮಾಜ ಸೇವೆ ಮಾಡಲು ಬಂದಂತಹ ಯುವಕರು ರಸ್ತೆಯಲ್ಲಿ ನಿಂತು ವಾಹನ ಚಾಲಕರ ಜೇವಿಗೆ ಕತ್ತರಿ ಹಾಕಿ ಪುಂಡಾಟಿಕೆ ಮೆರೆದಿರುವುದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

Also Read  ನಾಳೆ(ನ.14) ನೆಲ್ಯಾಡಿಯಲ್ಲಿ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರ

error: Content is protected !!
Scroll to Top