ಚಾಡ್ ಸೇನೆ ಮೇಲೆ ದಾಳಿ: 40 ಸೈನಿಕರು ಹುತಾತ್ಮ

(ನ್ಯೂಸ್ ಕಡಬ) newskadaba.com ಚಾಡ್, ಅ. 29. ಆಫ್ರಿಕಾದ ಚಾಡ್ ದೇಶದಲ್ಲಿ ಬೋಕೊ ಹರಾಮ್ ಭಯೋತ್ಪಾದಕರು ಚಾಡ್ ಸೇನೆಯ ಮೇಲೆ ದಾಳಿ ನಡೆಸಿದ್ದರಿಂದ 40 ಸೈನಿಕರು ಹುತಾತ್ಮರಾಗಿದ್ದಾರೆ. ಈ ದಾಳಿಯಲ್ಲಿ ಯುನಿಟ್ ಕಮಾಂಡರ್ ಕೂಡ ಮೃತಪಟ್ಟಿದ್ದಾರೆ ಎಂದು ಚಾಡ್ ಸೇನಾ ವಕ್ತಾರರು ಹೇಳಿದ್ದಾರೆ.

ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಚಾಡ್ ಅಧ್ಯಕ್ಷ ಮಹಮತ್ ಇಡ್ರಿಸ್ ಡೆಬಿ ಅವರು, ‘ನಮ್ಮ ಮೇಲೆ ದಾಳಿ ಮಾಡಿದ ಉಗ್ರರನ್ನು ಪ್ರತಿ ದಾಳಿ ಮಾಡಿ ಹತ್ಯೆ ಮಾಡಿದ್ದೇವೆ. ಸ್ಥಳದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿದೆ’ ಎಂದು ಹೇಳಿದ್ದಾರೆ.

Also Read  ಕೊಳೆತ ಸ್ಥಿತಿಯಲ್ಲಿ ರಿಕ್ಷಾ ಚಾಲಕನೋರ್ವನ ಮೃತದೇಹ ಪತ್ತೆ

 

 

 

error: Content is protected !!
Scroll to Top