ಅಡುಗೆ ಎಣ್ಣೆಯ ಬೆಲೆ ಏರಿಕೆ

(ನ್ಯೂಸ್ ಕಡಬ)newskadaba.com,. 29 ಬೆಂಗಳೂರು: ದೀಪಾವಳಿ ಹಬ್ಬ ಬರುತ್ತಿದ್ದಂತೆಯೇ ಅಡುಗೆ ಎಣ್ಣೆಯ ಬೆಲೆ ಒಂದು ಲೀಟರ್‌ಗೆ  ₹1ರಿಂದ  ₹5 ರವರೆಗೆ ಹೆಚ್ಚಾಗಿದೆ. ಈಗಾಗಲೇ ಅಗತ್ಯ ವಸ್ತು, ತರಕಾರಿ ಬೆಲೆ ಏರಿಕೆಯಾಗಿರುವ ನಡುವೆಯೇ ಪುನಃ ಅಡುಗೆ ಎಣ್ಣೆ ದರ ಹೆಚ್ಚಾಗಿದ್ದು ಬಡ, ಮಧ್ಯಮ ವರ್ಗದ ಗ್ರಾಹಕರನ್ನು ಕಂಗೆಡಿಸಿದೆ.


ಕಳೆದ ತಿಂಗಳಷ್ಟೇ ಕೇಂದ್ರ ಸರ್ಕಾರ ಅಡುಗೆ ಎಣ್ಣೆಯ ಆಮದು ಸುಂಕವನ್ನು ಶೇ.20ರಷ್ಟು ಹೆಚ್ಚಳ ಮಾಡಿದ್ದರಿಂದ ಏಕಾಏಕಿ ಅಡುಗೆ ಎಣ್ಣೆ ದರ ₹20ರಿಂದ ₹25ರವರೆಗೆ ಹೆಚ್ಚಳವಾಗಿತ್ತು. ಇದೀಗ ಪುನಃ ಅಡುಗೆ ಎಣ್ಣೆ ದರ ಏರಿಕೆ ಬರೆ ಬಿದ್ದಿದೆ.

Also Read  ಕಾಲೇಜು ವಿದ್ಯಾರ್ಥಿಗಳಿಗೆ ಬಂಪರ್ ಕೊಡುಗೆ ಪ್ರಕಟಿಸಿದ ಸರಕಾರ ➤ ಪ್ರತಿದಿನ 2 GB ಡಾಟಾ ಫ್ರೀ..‼️

ಸಗಟು ದರದಲ್ಲಿ ಪ್ರತಿ ಲೀಟರ್‌ ಸೂರ್ಯಕಾಂತಿ ಎಣ್ಣೆ ದರ ಕಳೆದ ವಾರ ₹120 – ₹124 ಇತ್ತು. ಇದೀಗ ₹128 ದಾಟಿದೆ. ತಾಳೆಎಣ್ಣೆ ₹117.50 ಇದ್ದುದು ₹120 ದಾಟಿದೆ. ಇದರ ಜೊತೆಗೆ ಕಳೆದೊಂದು ತಿಂಗಳಲ್ಲಿ ಸೋಯಾಬಿನ್‌ ಎಣ್ಣೆ ಕೇಜಿಗೆ ₹18, ಸನ್‌ಫ್ಲವರ್‌ ಎಣ್ಣೆ ₹20, ಸಾಸಿವೆ ಎಣ್ಣೆ ₹22 ಹೆಚ್ಚಳವಾಗಿದೆ.

error: Content is protected !!
Scroll to Top