ಸ್ಪೇನ್ ನ ಫುಟ್ಬಾಲ್ ಆಟಗಾರ ರೋಡ್ರಿ ಗೆ ಬ್ಯಾಲನ್ ಡಿ’ಓರ್ ಪ್ರಶಸ್ತಿ

(ನ್ಯೂಸ್ ಕಡಬ) newskadaba.com ನವದೆಹಲಿ, ಅ.29. ಐತಿಹಾಸಿಕ ಸಮಾರಂಭದಲ್ಲಿ ಸೋಮವಾರ ಸ್ಪೇನ್ ನ ಸ್ಟಾರ್ ಆಟಗಾರ, ಮ್ಯಾಂಚೆಸ್ಟರ್ ಸಿಟಿ ಮಿಡ್ ಫೀಲ್ಡರ್ ರೋಡ್ರಿ ಅವರಿಗೆ ಈ ವರ್ಷದ ಪ್ರತಿಷ್ಠಿತ ಬ್ಯಾಲನ್ ಡಿʼಓರ್ ವರ್ಷದ ಅತ್ಯುತ್ತಮ ಫುಟ್ಬಾಲ್ ಆಟಗಾರ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮ್ಯಾಡ್ರಿಡ್ ಸಂಜಾತ ರೋಡ್ರಿ(28) ಅವರು ರಿಯಲ್ ಮ್ಯಾಡ್ರಿಡ್ ಆಟಗಾರರಾದ ವಿನಿಶಿಯಸ್ ಜ್ಯೂನಿಯರ್, ಜ್ಯೂಡ್ ಜ್ಯೂಡ್ ಬೆಲ್ಲಿಂಗ್ ಹ್ಯಾಮ್ ಅವರನ್ನು ಹಿಂದಿಕ್ಕಿ ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾದರು. ಕಳೆದ ಸೀಸನ್ ನಲ್ಲಿ ಸತತ ನಾಲ್ಕನೇ ಬಾರಿಗೆ ಮ್ಯಾಂಚೆಸ್ಟರ್ ಸಿಟಿ ತಂಡ ಪ್ರಿಮಿಯರ್ ಲೀಗ್ ಪ್ರಶಸ್ತಿ ಗೆಲ್ಲುವಲ್ಲಿ ರೋಡ್ರಿ ಅದ್ಭುತ ಕೊಡುಗೆ ನೀಡಿದ್ದರು.

Also Read  ಕಲುಷಿತ ನೀರು ಕುಡಿದು 70 ಮಂದಿ ಅಸ್ವಸ್ಥ..!

 

error: Content is protected !!
Scroll to Top