(ನ್ಯೂಸ್ ಕಡಬ)newskadaba.com, ಅ. 29 ಬೆಂಗಳೂರು: ಸರ್ಕಾರವು ಗಣಿಗಾರಿಕೆ ಪ್ರವಾಸೋದ್ಯಮವನ್ನು ಜನಪ್ರಿಯಗೊಳಿಸುವ ಉಪಕ್ರಮದ ಭಾಗವಾಗಿ ಕೈಬಿಟ್ಟ ಗಣಿಗಾರಿಕೆ ಪ್ರದೇಶಗಳನ್ನು ಪ್ರವಾಸಿ ಆಕರ್ಷಣೀಯ ಕೇಂದ್ರಗಳಾಗಿ ಅಭಿವೃದ್ಧಿಪಡಿಸಲು ಮುಂದಾಗಿವೆ. ದಕ್ಷಿಣ ಆಫ್ರಿಕಾ ವಿಧಾನದಿಂದ ಸ್ಫೂರ್ತಿ ಪಡೆದ ಪ್ರವಾಸೋದ್ಯಮ ಇಲಾಖೆಯು ಹೊಸದಾಗಿ ಅನುಮೋದಿಸಲಾದ 2024-29 ಪ್ರವಾಸೋದ್ಯಮ ನೀತಿಯಲ್ಲಿ 25 ವಿಷಯಗಳಲ್ಲಿ ಸೇರಿಸಿದೆ.
ಈ ನೀತಿಯು ಮುಂದಿನ ಐದು ವರ್ಷಗಳಲ್ಲಿ 1,300 ಕೋಟಿ ರೂಪಾಯಿ ಖಾಸಗಿ ಹೂಡಿಕೆಯನ್ನು ಆಕರ್ಷಿಸುವ ಗುರಿ ಹೊಂದಿದೆ. ಇದನ್ನು ಪ್ರೋತ್ಸಾಹಿಸಲು ವಿವಿಧ ವಲಯಗಳಲ್ಲಿ 50 ಲಕ್ಷ ರೂಪಾಯಿಗಳಿಂದ 10 ಕೋಟಿ ರೂಪಾಯಿಗಳವರೆಗೆ ಹೂಡಿಕೆಗಳಿಗೆ ನೀತಿಯು ಶೇಕಡಾ 15 ರಿಂದ 25ರವರೆಗೆ ವಿಶೇಷ ಪ್ರೋತ್ಸಾಹವನ್ನು ನೀಡುತ್ತದೆ.