ರಸ್ತೆ ಬದಿ ಮೊಮೋಸ್ ಸೇವಿಸಿ ಮಹಿಳೆ ಮೃತ್ಯು: 22 ಮಂದಿ ಅಸ್ವಸ್ಥ

(ನ್ಯೂಸ್ ಕಡಬ) newskadaba.com ಹೈದರಾಬಾದ್, ಅ.29. ನಗರದ ಬಂಜಾರಾ ಹಿಲ್ ಪ್ರದೇಶದ ರಸ್ತೆ ಬದಿ ಮಳಿಗೆಯಲ್ಲಿ ಮೊಮೋಸ್ ಸೇವಿಸಿದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ವರದಿಯಾಗಿದೆ.

ಮೃತಪಟ್ಟ ಮಹಿಳೆಯ ಇಬ್ಬರು ಪುತ್ರಿಯರು ಹಾಗೂ ಇತರ 20 ಮಂದಿ ಅಸ್ವಸ್ಥಗೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ರೇಷ್ಮಾ ಬೇಗಂ (31) ಮತ್ತು 14 ಹಾಗೂ 12 ವರ್ಷ ವಯಸ್ಸಿನ ಆಕೆಯ ಇಬ್ಬರು ಹೆಣ್ಣುಮಕ್ಕಳು ಅಕ್ಟೊಬರ್ 25ರಂದು ಬೀದಿಬದಿ ಮೊಮೋಸ್ ಸೇವಿಸಿದ್ದರು. ತಕ್ಷಣವೇ ಮೂವರಿಗೂ ವಿಷಪ್ರಾಶನದ ಲಕ್ಷಣಗಳು ಕಂಡುಬಂದವು. ವಾಂತಿ ಬೇಧಿ ಮತ್ತು ತೀವ್ರ ಹೊಟ್ಟೆನೋವು ಕಾಣಿಸಿಕೊಂಡರೂ, ಸ್ವಲ್ಪ ವಿಶ್ರಾಂತಿ ಪಡೆದರೆ ಆರೋಗ್ಯ ಸುಧಾರಿಸಬಹುದು ಎಂದು ತಕ್ಷಣ ಆಸ್ಪತ್ರೆಗೆ ದಾಖಲಾಗಲಿಲ್ಲ. ಆದರೆ 27ರವರೆಗೂ ಹೊಟ್ಟೆನೋವು ಕಡಿಮೆಯಾಗದೇ ಇದ್ದಾಗ ಆಸ್ಪತ್ರೆಗೆ ದಾಖಲಾದರು. ಆದರೆ ಅವರ ದೇಹಸ್ಥಿತಿ ಹದಗೆಡಲಾರಂಭಿಸಿತು ಎಂದು ಪೊಲೀಸರು ಹೇಳಿದ್ದಾರೆ.

Also Read  ಅಪ್ಪನಿಗೆ ಚಾಕು ತೋರಿಸಿ ಬೆದರಿಸಿ ಹಣ ದರೋಡೆ.!! ➤ 1.14 ಕೋಟಿ ರೂ.ಹಣ ವಸೂಲಿ ಮಾಡಿದ 24 ವರ್ಷದ ಮಗ

 

error: Content is protected !!
Scroll to Top