ಕೇಂದ್ರ ಸರ್ಕಾರ: 2025ಕ್ಕೆ ಜನಗಣತಿ ಶುರು

(ನ್ಯೂಸ್ ಕಡಬ)newskadaba.com, ಅ.28,ನವದೆಹಲಿ: 2028 ರ ಲೋಕಸಭೆ ಚುನಾವಣೆಗೆ ಮುನ್ನವೇ ದೇಶದಲ್ಲಿ ಜನಗಣತಿ ನಡೆಸಬೇಕೆಂದು ಕೇಂದ್ರ ಸರ್ಕಾರ ತಯಾರಿ ನಡೆಸುತ್ತಿದೆ ಎಂದು ತಿಳಿದು ಬಂದಿದೆ. ನಾಲ್ಕು ವರ್ಷಗಳ ಸುದೀರ್ಘ ವಿಳಂಬದ ನಂತರ ದೇಶದಲ್ಲಿ ಗಣತಿ 2025ರಿಂದ 2026ರ ವರೆಗೆ ನಡೆಯಲಿದೆ ಎಂಬ ನಿರೀಕ್ಷೆಯಿದೆ. 2011ರ ಜನಗಣತಿಯ ನಂತರ 10 ವರ್ಷಗಳ ನಂತರ ಅಂದರೆ 2021ಕ್ಕೆ ಜನಗಣತಿ ನಡೆಯಬೇಕಿತ್ತು. ಆದರೆ ಕೊರೋನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ನಾಲ್ಕು ವರ್ಷ ತಡವಾಗಿದೆ.

ಜನಗಣತಿಯ ನಂತರ ಜನಸಂಖ್ಯೆ ಆಧಾರದ ಮೇಲೆ ಲೋಕಸಭಾ ಸ್ಥಾನಗಳ ವಿಂಗಡಣೆ ಆಗಲಿದೆ. 2028ಕ್ಕೆ ಲೋಕಸಭಾ ಚುನಾಚಣೆ ನಡೆಯಲಿದ್ದು ಆ ವೇಳೆ ಸಂಪೂರ್ಣ ಸಮೀಕ್ಷೆಯ ವರದಿ ಕೈ ಸೇರಲಿದೆ ಎಂದು ಹೇಳಲಾಗುತ್ತದೆ. ಬರೇ ಜನಗಣತಿಗೆ ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಜಾತಿ ಗಣತಿ ನಡೆಸಿದ ಬಳಿಕ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Also Read  ಈ 8 ರಾಶಿಯವರಿಗೆ ವಿವಾಹ ಯೋಗ ವ್ಯಾಪಾರ,ದಾಂಪತ್ಯದಲ್ಲಿ ಸಮಸ್ಯೆ ನಿವಾರಣೆಯಾಗುತ್ತದೆ ಕಷ್ಟಗಳು ಪರಿಹಾರವಾಗುತ್ತದೆ

error: Content is protected !!
Scroll to Top