ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಕಾರು: ಅಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ಉಡುಪಿ, ಅ.28. ಈಶ್ವರ ನಗರದ ನಗರಸಭೆ ಪಂಪ್ ಹೌಸ್ ಬಳಿ ಹೆದ್ದಾರಿಯಲ್ಲಿ ಭಾನುವಾರ ಬೆಳಿಗ್ಗೆ ಒಂದು ಕಾರು ಹಾಗೂ ಸಂಜೆ ವೇಳೆಗೆ ಮತ್ತೊಂದು ಕಾರು ಚರಂಡಿಗೆ ಬಿದ್ದ ಘಟನೆ ನಡೆದಿದೆ.

ಬೆಳಗ್ಗೆ ಉಡುಪಿಯಿಂದ ಕುದುರೆಮುಖಕ್ಕೆ ಪ್ರವಾಸಕ್ಕೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ಚರಂಡಿಗೆ ಬಿದ್ದಿದೆ. ಸಂಜೆಯ ವೇಳೆಗೆ ಹಿರೇಬೆಟ್ಟುವಿನಲ್ಲಿ ‘ಎರಳ ಗ್ಯಾರಂಟಿ ಅತ್ತ’ ನಾಟಕ ಪ್ರದರ್ಶನಕ್ಕೆಂದು ಹೊರಟಿದ್ದ ತುಳು ರಂಗಭೂಮಿ ಹಾಗೂ ಸಿನಿಮಾ ಕಲಾವಿದರನ್ನು, ಸಹ ಕಲಾವಿದರೊಂದಿಗೆ ವಾಹನವೂ ಚರಂಡಿಗೆ ಬಿದ್ದಿತ್ತು. ಅದೃಷ್ಟವಶಾತ್, ಎಲ್ಲಾ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Also Read  ರಾಜ್ಯಪಾಲರ ಅಧಿಕಾರ ಮತ್ತಷ್ಟು ಕಡಿತಕ್ಕೆ ಸರ್ಕಾರ ಚಿಂತನೆ

 

error: Content is protected !!
Scroll to Top