ಸೌದಿ ಅರೇಬಿಯಾ: ವಿಶ್ವದ ಅತಿದೊಡ್ಡ ಕಟ್ಟಡ ನಿರ್ಮಾಣ ಕಾರ್ಯ ಶುರು

(ನ್ಯೂಸ್ ಕಡಬ)newskadaba.com,.28, ರಿಯಾದ್: ತೈಲ ಸಂಪತ್ತಿನ ಮೂಲಕವೇ ನವೀನ ಮೂಲಸೌಕರ್ಯ ಯೋಜನೆಗಳತ್ತ ವಿಸ್ತರಿಸಲು ಮುಂದಾಗಿರುವ ಸೌದಿ ಅರೇಬಿಯಾ, ವಿಶ್ವದ ಅತಿದೊಡ್ಡ ಕಟ್ಟಡ ಯೋಜನೆ ‘ಮುಕಾಬ್’ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸಿದೆ.

ಚೌಕಾಕಾರದಲ್ಲಿರುವ ಈ ಕಟ್ಟಡ 400 ಮೀಟರ್ ಎತ್ತರವಿರಲಿದೆ. ಕಾಮಗಾರಿ ಮುಗಿದ ಬಳಿಕ, ಇದು ಜಗತ್ತಿನ ಅತಿದೊಡ್ಡ ಕಟ್ಟಡ ಎನಿಸಿಕೊಳ್ಳಲಿದೆ. ರಾಜಧಾನಿ ರಿಯಾದ್ ಬಳಿ ಇರುವ ಈ 3 ಕಟ್ಟಡದಲ್ಲಿ 20 ಲಕ್ಷ ಲಕ್ಷ ಚದರ ಮೀಟರ್‌ ಸ್ಥಳಾವಕಾಶ ಸಿಗಲಿದೆ. ವಿಸ್ತೀರ್ಣದಲ್ಲಿ ಇದು ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ಹೆಗ್ಗುರುತಿನ ಕಟ್ಟಡ ಎಂಪೈರ್ ಸ್ಟೇಟ್ ಬಿಲ್ಡಿಂಗ್‌ಗಿಂತ 20 ಪಟ್ಟು ದೊಡ್ಡದಾಗಿರಲಿದೆ.

Also Read  ವಿಶ್ವ ವಿಖ್ಯಾತ ಐಫೆಲ್ ಟವರ್ ಗೆ ಬಾಂಬ್ ಬೆದರಿಕೆ - ಪ್ರವಾಸಿಗರಿಗೆ ನಿರ್ಬಂಧ

 

error: Content is protected !!
Scroll to Top